ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಸೀರುಂಡೆ ರಘು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಸೀರುಂಡೆ ರಘು ನಾಯಕನಾಗಿ ನಟಿಸಿರುವ ‘ರಣಾಕ್ಷ’ ಚಿತ್ರದ ಮೆಲೋಡಿ ಹಾಡೊಂದು ನಿನ್ನೆ ಪ್ರೇಮಿಗಳ ದಿನದಂದು ಬಿಡುಗಡೆಯಾಗಿದೆ.”ಇರಲೇ ಜೊತೆಗೆ” ಎಂಬ ಈ ಹಾಡಿಗೆ ಅಭಿಷೇಕ್ ಹಾಗೂ ಸುನಿಧಿ ಗಣೇಶ್ ಧ್ವನಿಯಾಗಿದ್ದು, ವಿಶಾಲ್ ಆಲಾಪ್ ಸಂಗೀತ ಸಂಯೋಜನೆ ನೀಡುವ ಮೂಲಕ ಸಾಹಿತ್ಯ ಬರೆದಿದ್ದಾರೆ.
ಕೆ ವಿ ಆರ್ ಪಿಚರ್ಸ್ ಬ್ಯಾನರ್ ನಡಿ ರಾಮು ಮತ್ತು ಶ್ರೀಮತಿ ಶೋಭಾ ಶಿವಾಜಿ ರಾವ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕೆ ರಾಘವ್ ನಿರ್ದೇಶಿಸಿದ್ದಾರೆ. ಸೀರುಂಡೆ ರಘು ಸೇರಿದಂತೆ ರಕ್ಷಾ, ಹನುಮಂತು, ಅಪೂರ್ವ, ಮುನಿರಾಜು ತೆರೆ ಹಂಚಿಕೊಂಡಿದ್ದಾರೆ. ಧನುಷ್ ಎಲ್ ಬಿದ್ರೆ ಸಂಕಲನ, ದೀಪಕ್ ಕುಮಾರ್ ಛಾಯಾಗ್ರಹಣವಿದೆ.