ಬೆಂಗಳೂರು: ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಶಿಸ್ತಿನ ಪಾಠ ಮಾಡಿದ್ದಾರೆ. ನಾಯಕರು ಶಿಸ್ತಾಗಿಲ್ಲ ಎಂದರೆ ಕಾರ್ಯಕರ್ತರು ಶಿಸ್ತಾಗಿರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆ ಬಳಿಕ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ನಮ್ಮ ಕೆಲ ನಾಯಕರು ಡಿಸಿಪ್ಲೀನ್ ಇಲ್ಲ. ನಾಯಕರು ಶಿಸ್ತಿನಿಂದ ಇರದಿದ್ದರೆ ಕಾರ್ಯಕರ್ತರು ಶಿಸ್ತಿನಿಂದಿರಲು ಹೇಗೆ ಸಾಧ್ಯ? ಯಾವ ನಾಯಕರು ಪಾರ್ಟಿಯನ್ನು ಬುಲ್ಡೋಜ್ ಮಾಡಬಾರದು. ಪಕ್ಷಕ್ಕಿಂತ ನಾವೇ ದೊಡ್ದವರೆಂದು ಭಾವಿಸಬೇಡಿ ಎಂದು ಹೇಳಿದರು.
ಪಕ್ಷ ತಾಯಿ ಇದ್ದಂತೆ. ಸರ್ಕಾರ ಮಗುವಿನಂತೆ. ಶಾಸಕರು, ನಾಯಕರು, ಸಚಿವರು ಯಾರೇ ಆಗಲಿ ಶಿಸ್ತು ಮೀರಬಾರದು. ಕಾರ್ಯಕರ್ತರನ್ನು ಗೌರವದಿಂದ ಕಾಣಬೇಕು. ಪಕ್ಷವನ್ನೇ ಬುಲ್ಡೋಜ್ ಮಾಡುವವರನ್ನು ನಾವು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.