ಬಾಹುಬಲಿ ನಟ ರಾಣಾ ದಗ್ಗುಬಾಟಿ ಅಭಿಮಾನಿಗಳ ಜೊತೆ ಕಳೆದ ಸುಂದರ ಕ್ಷಣದ ಫೋಟೋ, ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಚಿಕಾಗೋದಲ್ಲಿ ತಮ್ಮ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಂಡ ರಾಣಾ ದಗ್ಗುಬಾಟಿ ನಂತ್ರ ಆಟೋಗ್ರಾಫ್ ಹಾಕಿದ್ದಾರೆ.
ಚಿಕಾಗೋದಲ್ಲಿ ರಾಣಾ ದಗ್ಗುಬಾಟಿ ಕಾರನ್ನು ಅಭಿಮಾನಿಗಳು ಹಿಂಬಾಲಿಸಿದ್ದಾರೆ. ನಂತ್ರ ಸೆಲ್ಫಿ ನೀಡುವಂತೆ ಕೇಳಿದ್ದಾರೆ. ಕಾರಿನ ವೇಗ ಹೆಚ್ಚಿಸುವ ಬದಲು ಕಾರನ್ನು ಸೈಡ್ ನಲ್ಲಿ ನಿಲ್ಲಿಸಿದ ರಾಣಾ ದಗ್ಗುಬಾಟಿ, ಅಭಿಮಾನಿಗಳಿಗೆ ಸೆಲ್ಫಿ ನೀಡಿದ್ದಾರೆ. ಇಷ್ಟೆ ಅಲ್ಲ, ಅಭಿಮಾನಿ ಶರ್ಟ್ ಗೆ ಆಟೋಗ್ರಾಫ್ ಹಾಕಿದ್ದಾರೆ.
ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ರಾಣಾ, ಅಭಿಮಾನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ರಾಣಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲೂ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕೇವಲ ಅತ್ಯಂತ ಸುಂದರವಾದ ಜನರು, ಧನ್ಯವಾದಗಳು ಎಂದು ಬರೆದಿದ್ದಾರೆ. ರಾಣಾ 2023ರಲ್ಲಿ ಸ್ಪೈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ ವೆಟ್ಟೈಯಾನ್ ನಲ್ಲಿ ರಾಣಾ ನಟಿಸಿದ್ದು, ಅಕ್ಟೋಬರ್ 5ರಂದು ಚಿತ್ರ ತೆರೆಗೆ ಬರಲಿದೆ.