
ಬೆಂಗಳೂರು: ಯುಗಾದಿ ದಿನವಾದ ಇಂದು ಹಿಂದೂಗಳು ಹಬ್ಬ ಮಾಡಿ ಚಂದ್ರನ ವೀಕ್ಷಿಸಿ, ದೇವರ ದರ್ಶನ ಮಾಡಿ ತಂದೆ, ತಾಯಿ, ಹಿರಿಯರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ಕೆಲವೆಡೆ ಮೋಡ ಮುಸುಕಿದ ವಾತಾವರಣದ ಕಾರಣ ಚಂದ್ರ ದರ್ಶನವಾಗಿಲ್ಲ.
ಚಂದ್ರದರ್ಶನದೊಂದಿಗೆ ನಾಳೆಯಿಂದ ರಂಜಾನ್ ಉಪವಾಸ ಪ್ರಾರಂಭವಾಗಲಿದೆ. ನಾಳೆಯಿಂದ ಒಂದು ತಿಂಗಳ ಕಾಲ ರಂಜಾನ್ ಉಪವಾಸ ವ್ರತಾಚರಣೆ ನಡೆಯಲಿದೆ. ಬೆಂಗಳೂರಿನಲ್ಲಿ ಚಂದ್ರ ಗೋಚರವಾದ ಹಿನ್ನೆಲೆಯಲ್ಲಿ ಉಪವಾಸ ಆರಂಭವಾಗಲಿದೆ. ಮೇ 3 ರಂದು ರಂಜಾನ್ ಹಬ್ಬ ಆಚರಿಸಲಾಗುವುದು.