ದೆಹಲಿಯಲ್ಲಿರುವ ದೇಶದ ಪ್ರತಿಷ್ಠಿತ ಏಮ್ಸ್ ಸಂಸ್ಥೆಯಲ್ಲಿನ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ದಸರಾ ಅಂಗವಾಗಿ ರಾಮಲೀಲಾ ಕಿರುನಾಟಕವನ್ನು ಅಭಿನಯಿಸಿದ್ದರು.
ಏಮ್ಸ್ ಆವರಣದ ಹಾಸ್ಟೆಲ್ ಬಳಿಯೇ ಈ ಸ್ಕಿಟ್ ಜರುಗಿತ್ತು. ಆಧುನಿಕ ಸ್ಪರ್ಶ ಕೊಡುವ ಭರದಲ್ಲಿ ರಾಮ, ಸೀತಾ ಪಾತ್ರಗಳಿಗೆ ವಿದ್ಯಾರ್ಥಿಗಳು ಅವಮಾನ ಎಸಗುವ ರೀತಿಯಲ್ಲಿ ಮಾತನಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಜನಸಾಮಾನ್ಯರು ಮತ್ತು ಹಿಂದೂ ಸಂಘಟನೆಗಳಿಂದ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು.
ʼಆರೆಂಜ್ʼ ಕ್ಯಾಪ್ ಪಡೆದ ಋತುರಾಜ್ ಗೆ ತವರಿನಲ್ಲಿ ಅದ್ಧೂರಿ ಸ್ವಾಗತ
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಅಪಾರ ನಂಬಿಕೆಯ ಮಹಾಕಾವ್ಯವಾದ ರಾಮಾಯಣ ಮತ್ತು ಅದರಲ್ಲಿನ ದೇವರುಗಳಾದ ರಾಮ, ಸೀತಾ ಪಾತ್ರಗಳಿಗೆ ಹೇಗೆ ಅವಮಾನ ಮಾಡಲು ಸಾಧ್ಯ. ಈ ತರಹ ಮಾಡಿ ಏನು ಸಾಧಿಸಲಾಗುತ್ತದೆ ಎಂದು ಟ್ವಿಟರ್‌ನಲ್ಲಿ ಹಲವರು ಪ್ರಶ್ನಿಸಿದ್ದರು. ಏಮ್ಸ್ ಆಡಳಿತ, ಹಿರಿಯ ವೈದ್ಯರು ತರಾಟೆಗೆ ತೆಗೆದುಕೊಂಡಿದ್ದರು. ಕೂಡಲೇ ಎಚ್ಚೆತ್ತ ಏಮ್ಸ್ ಆಡಳಿತ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಸಭೆ ನಡೆಸಿ ತಿಳಿಹೇಳಿದೆ.
ಇಂಥ ದುಸ್ಸಾಹಸ ಒಳ್ಳೆಯದಲ್ಲ ಎಂದು ಎಚ್ಚರಿಕೆ ಕೊಟ್ಟಿದೆ. ಬಳಿಕ ಏಮ್ಸ್ ವಿದ್ಯಾರ್ಥಿಗಳ ಸಂಘಟನೆಯು ಸ್ಕಿಟ್‌ನಿಂದಾದ ಪ್ರಮಾದಕ್ಕಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಿದೆ. ಭವಿಷ್ಯದಲ್ಲಿ ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ಎಚ್ಚರವಹಿಸುತ್ತೇವೆ ಎಂದು ಕೇಳಿಕೊಂಡಿದೆ. ಸ್ಕಿಟ್‌ಗೆ ಏಮ್ಸ್ ಆಡಳಿತದ ಅನುಮತಿ ಹಾಗೂ ಪ್ರಾಯೋಜಕತ್ವ ಇರಲಿಲ್ಲ. ವಿದ್ಯಾರ್ಥಿಗಳು ಖಾಸಗಿಯಾಗಿ ಆಯೋಜಿಸಿಕೊಂಡಿದ್ದರು ಎಂದು ಕೂಡ ತಿಳಿದುಬಂದಿದೆ.