![](https://kannadadunia.com/wp-content/uploads/2024/01/Buddhist-Places-to-See-in-Uttar-Pradesh-2023-11-29T212353.506.jpg)
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ವೈಭವೋಪೇತವಾಗಿ ನೆರವೇರಿದೆ. ರಾಮಭಕ್ತಿ ಕೇವಲ ನಂಬಿಕೆ ಮಾತ್ರವಲ್ಲ, ಆರ್ಥಿಕತೆಯೊಂದಿಗೆ ಕೂಡ ಸಂಬಂಧ ಹೊಂದಿದೆ. ರಾಮನಗರಿ ಅಯೋಧ್ಯೆ ನಂಬಿಕೆ ಮತ್ತು ಧರ್ಮದ ತಾಣ. ಇದರ ಜೊತೆಗೆ ಆರ್ಥಿಕತೆಯ ಹೊಸ ಕೇಂದ್ರವಾಗಿದೆ. ರಾಮಮಂದಿರ ನಿರ್ಮಾಣವು ಅಯೋಧ್ಯೆಗೆ ಕಲ್ಯಾಣವನ್ನು ತರುವುದು ಮಾತ್ರವಲ್ಲದೆ ಉತ್ತರ ಪ್ರದೇಶ ಸರ್ಕಾರಕ್ಕೂ ಆದಾಯ ತರಲಿದೆ.
ಈವರೆಗೆ 1 ಲಕ್ಷ ಕೋಟಿ ವಹಿವಾಟು
ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೂ ಮುನ್ನವೇ ಸಣ್ಣ ಮತ್ತು ದೊಡ್ಡ ವ್ಯಾಪಾರಸ್ಥರು ಸಾಕಷ್ಟು ಲಾಭ ಗಳಿಸಿದ್ದರು. ಧ್ವಜ, ಹೂವು-ಹಣ್ಣು, ಪೂಜಾ ಸಾಮಗ್ರಿ, ಸಿಹಿತಿಂಡಿಗಳು ಮತ್ತು ದೀಪಗಳನ್ನು ಭಕ್ತರು ವ್ಯಾಪಕವಾಗಿ ಖರೀದಿಸಿದ್ದಾರೆ. ಟೆಂಟ್‌ಗಳು ಮತ್ತು ಸಿಹಿತಿಂಡಿಗಳ ಬುಕ್ಕಿಂಗ್‌ಗಳಂತೂ ಲೆಕ್ಕವೇ ಇಲ್ಲದಷ್ಟು ಪ್ರಮಾಣದಲ್ಲಿ ಆಗಿದ್ದವು.
ಟ್ರೇಡರ್ಸ್ ಆರ್ಗನೈಸೇಶನ್ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಪ್ರಕಾರ, ದೇಶಾದ್ಯಂತ ವರ್ತಕರು 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸಿದ್ದಾರೆ.
ಅಯೋಧ್ಯೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ ಪೂಜಾ ಸಾಮಗ್ರಿಗಳಿಗೆ ಬಹಳ ಬೇಡಿಕೆಯಿತ್ತು. ಮನೆಮನೆಗಳಲ್ಲೂ ಭರ್ಜರಿ ಪೂಜೆಗಳು ನೆರವೇರಿವೆ. ಮಾರುಕಟ್ಟೆಗಳು, ದೇವಾಲಯಗಳು ಮತ್ತು ಇತರ ಸ್ಥಳಗಳನ್ನು ಅಲಂಕರಿಸಲು ಹೂವುಗಳಿಗೆ ಹೆಚ್ಚಿನ ಬೇಡಿಕೆಯಿತ್ತು. ಇದಲ್ಲದೇ ಮಣ್ಣಿನ ದೀಪಗಳು, ಸಿಹಿ ತಿನಿಸುಗಳು, ರಾಮಧ್ವಜಗಳಿಗೆ ಬೇಡಿಕೆ ಹೆಚ್ಚಿತ್ತು.
ರಾಮ ಮಂದಿರದ ಫೋಟೋ ಮುದ್ರಿಸಿದ ಕುರ್ತಾ, ಕ್ಯಾಪ್, ಟೀ ಶರ್ಟ್, ಲುಂಗಿಗಳ ಖರೀದಿ ಜೋರಾಗಿತ್ತು. ಅನೇಕ ವಾದ್ಯಗಳ ಬುಕ್ಕಿಂಗ್ ಕೂಡ ಭರಾಟೆಯಲ್ಲಿ ನಡೆದಿದ್ದು ವಿಶೇಷ. ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ 20 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು ವಿಶೇಷ.
ಕಳೆದ ಕೆಲವು ದಿನಗಳಿಂದಲೂ ದೇಶದಲ್ಲಿ ಹಬ್ಬದ ವಾತಾವರಣವಿದೆ. ರಾಮಮಂದಿರ ಉದ್ಘಾಟನೆಯೊಂದಿಗೆ ಅಯೋಧ್ಯೆಯ ವ್ಯಾಪಾರ ವಹಿವಾಟು ಜೊತೆಗೆ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ವೇಗವಾಗಿ ಹೆಚ್ಚಲಿದೆ. ರಾಮಮಂದಿರ ನಿರ್ಮಾಣದಿಂದ ಅಯೋಧ್ಯೆಯ ಆರ್ಥಿಕತೆ ಮಾತ್ರವಲ್ಲದೆ ಉತ್ತರ ಪ್ರದೇಶ ಸರ್ಕಾರದ ಬೊಕ್ಕಸ ಕೂಡ ಭರ್ತಿಯಾಗಲಿದೆ.
ಅಯೋಧ್ಯೆಯಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮದ ಹೆಚ್ಚಳದಿಂದಾಗಿ ಯುಪಿ ಸರ್ಕಾರದ ಆದಾಯವು ಹೆಚ್ಚಾಗುತ್ತದೆ. 2025ರ ಹಣಕಾಸು ವರ್ಷದಲ್ಲಿ ಉತ್ತರ ಪ್ರದೇಶ ಸರ್ಕಾರ 20,000 ರಿಂದ 25,000 ಕೋಟಿ ರೂಪಾಯಿಗಳ ಹೆಚ್ಚುವರಿ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ.
ಯುಪಿ ಸರ್ಕಾರದ ಬಜೆಟ್ ಪ್ರಕಾರ, ಸರ್ಕಾರದ ತೆರಿಗೆ ಆದಾಯವು 2024ರ ಹಣಕಾಸು ವರ್ಷದಲ್ಲಿ 2.5 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಬಹುದು. 2022ಕ್ಕೆ ಹೋಲಿಸಿದರೆ 2024 ರಲ್ಲಿ ಉತ್ತರ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ಮಾಡುವ ವೆಚ್ಚವು ದ್ವಿಗುಣಗೊಳ್ಳಬಹುದು. ಉತ್ತರ ಪ್ರದೇಶದಲ್ಲಿ ದೇಸೀ, ವಿದೇಶಿ ಪ್ರವಾಸಿಗರು ವೆಚ್ಚ ಮಾಡಿದ್ದು 10,000 ಕೋಟಿ ರೂಪಾಯಿ.
ಪ್ರವಾಸಿಗರ ಸಂಖ್ಯೆ
2022 ರಲ್ಲಿ 32 ಕೋಟಿ ದೇಶೀಯ ಪ್ರವಾಸಿಗರು ಉತ್ತರ ಪ್ರದೇಶಕ್ಕೆ ಬಂದಿದ್ದಾರೆ. ರಾಮಮಂದಿರದ ಪ್ರತಿಷ್ಠಾಪನೆಯ ನಂತರ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುವುದರಲ್ಲಿ ಅನುಮಾನವಿಲ್ಲ. 2028ರ ವೇಳೆಗೆ ಉತ್ತರ ಪ್ರದೇಶದ ಜಿಡಿಪಿ 500 ಬಿಲಿಯನ್ ಡಾಲರ್‌ಗಳನ್ನು ದಾಟಲಿದೆ. 2024ರ ಹಣಕಾಸು ವರ್ಷದಲ್ಲಿ ಉತ್ತರ ಪ್ರದೇಶದ ರಾಜ್ಯ ಜಿಡಿಪಿ 298 ಬಿಲಿಯನ್ ಡಾಲರ್‌ಗೆ ತಲುಪಬಹುದು.