ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರದಲ್ಲಿ ರಾಮ್ ಲಲ್ಲಾ ಮೂರ್ತಿಯ ಮೊದಲ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಐತಿಹಾಸಿಕ ದಿನದಂದು ನೆಟ್ಟಿಗರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದು, ಹಲವರು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ.
51 ಇಂಚಿನ ರಾಮ್ ಲಲ್ಲಾ ವಿಗ್ರಹವನ್ನು ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಕಪ್ಪು ಕಲ್ಲಿನಿಂದ ಕೆತ್ತಲಾದ ರಾಮ್ ಲಲ್ಲಾ ಮೂರ್ತಿಯನ್ನು ಕಳೆದ ವಾರ ದೇವಾಲಯದ ಒಳಗೆ ಇರಿಸಲಾಗಿತ್ತು. ಅದನ್ನು ಪರದೆಯಿಂದ ಮುಚ್ಚಲಾಗಿತ್ತು, ಅದನ್ನು ಇಂದು ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಬಹಿರಂಗಪಡಿಸಲಾಯಿತು.
ಓರ್ವ ಬಳಕೆದಾರರು, “ಇದು ಸುಂದರವಾಗಿ ಕೆತ್ತಲಾದ ವಿಗ್ರಹ. ಅರುಣ್ ಯೋಗಿರಾಜ್ ಅದ್ಭುತ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಇನ್ನೊಬ್ಬರು “ಸಂತೋಷದ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಎಂದು ಬರೆದುಕೊಂಡಿದ್ದಾರೆ.
ಮತ್ತೋರ್ವ ಬಳಕೆದಾರರು, “ಕಣ್ಣೀರು ಮತ್ತು ಗೌರವದಿಂದ, ಭಗವಾನ್ ರಾಮನನ್ನು ಸ್ವಾಗತಿಸುತ್ತೇವೆ. ಈ ಭೂಮಿ ಆಶೀರ್ವದಿಸಲ್ಪಡಲಿ ಎಂದಿದ್ದಾರೆ.
ಮತ್ತೋರ್ವ ಬಳಕೆದಾರರು “ರಾಮಲಲ್ಲಾ ವಿಗ್ರಹ ತುಂಬಾ ಸುಂದರವಾಗಿದೆ, ಇದನ್ನು ವರ್ಣಿಸಲು ಪದಗಳು ಸಾಲುತ್ತಿಲ್ಲ, ಜೈ ಜೈ ಶ್ರೀ ರಾಮ್ ಎಂದು ಬರೆದಿದ್ದಾರೆ. ಇನ್ನೊಬ್ಬರು “ನನ್ನ ಜೀವಿತಾವಧಿಯಲ್ಲಿ ಈ ಕ್ಷಣಕ್ಕೆ ಸಾಕ್ಷಿಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.