ಬೆಂಗಳೂರು: ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಐಸಿಸ್ ಶಂಕಿತ ಉಗ್ರರಾದ ಅಬ್ದುಲ್ ಮತೀನ್ ತಾಹಾ ಮತ್ತು ಮುಸಾವಿರ್ ಹುಸೇನ್ ಶಾಜೀಬ್ ಅವರ ಆಲ್ ಹಿಂದ್ ಉಗ್ರ ಚಟುವಟಿಕೆಗಳ ಪ್ರಕರಣದಲ್ಲಿ ಎನ್ಐಎ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಐಸಿಸ್ ಸಂಘಟನೆಗೆ ಯುವಕರನ್ನು ಸೆಳೆದು ತರಬೇತಿ ನೀಡುತ್ತಿದ್ದ ಇವರ ಸಂಗತಿಯನ್ನು ಸಿಸಿಬಿ ಪೊಲೀಸರು 2020ರಲ್ಲಿ ಬಯಲಿಗೆಳೆದಿದ್ದರು. ಹಲವರನ್ನು ಬಂಧಿಸಿದ್ದರು. ನಂತರ ಎನ್ಐಎ ಪ್ರಕರಣದ ತನಿಖಾ ಜವಾಬ್ದಾರಿ ವಹಿಸಿಕೊಂಡು ತನಿಖೆಯಲ್ಲಿ ಆಲ್ ಹಿಂದ್ ಪ್ರಧಾನ ಸೂತ್ರದಾರರು ತೀರ್ಥಹಳ್ಳಿಯ ಅಬ್ದುಲ್ ಮತಿನ್ ಮತ್ತು ಮುಸಾವಿರ್ ಹುಸೇನ್ ಎಂಬುದು ಬಯಲಾಗಿತ್ತು
2020ರಿಂದ ಅಜ್ಞಾತರಾಗಿದ್ದ ಅಬ್ದುಲ್ ಮತಿನ್ ಮತ್ತು ಮುಸಾವಿರ್ ಹುಸೇನ್ ಗುಪ್ತವಾಗಿ ಐಸಿಸ್ ಚಟುವಟಿಕೆ ಮುಂದುವರೆಸಿದ್ದರು. ಇದರ ಭಾಗವಾಗಿ ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದರು. ಆರೋಪಿಗಳನ್ನು ಏಪ್ರಿಲ್ 12ರಂದು ಕೊಲ್ಕತ್ತಾದಲ್ಲಿ ಬಂಧಿಸಲಾಗಿತ್ತು, ಇಬ್ಬರೂ ಭಾಗಿಯಾಗಿದ್ದ ಪ್ರಕರಣದಲ್ಲಿ ವಿಚಾರಣೆ ನಡೆಸಿ ಪ್ರಮುಖ ಸಾಕ್ಷ್ಯಾಧಾರ ಸಂಗ್ರಹಿಸಲಾಗಿದ್ದು, ತನಖೆ ಪೂರ್ಣಗೊಳಿಸಿ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.