ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು, ಈ ಮಧ್ಯೆ ಬಾಂಬರ್ ಬಗ್ಗೆ ಹಲವು ಮಹತ್ವದ ಸುಳಿವುಗಳು ಸಿಕ್ಕಿವೆ.
ಶಂಕಿತ ಹೂಡಿ ಬಳಿ ಬಟ್ಟೆ ಬದಲಿಸಿ, ಟೋಪಿ ಬಿಟ್ಟು ಹೋಗಿದ್ದಾನೆ. ಎನ್ ಐ ಎ ಹಾಗೂ ಸಿಸಿಬಿ ತಂಡಕ್ಕೆ ಆತ ಅಲ್ಲಿಯೇ ಟೋಪಿ ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಶಂಕಿತನದ್ದು ಎನ್ನಲಾದ ಟೋಪಿಯನ್ನು ಈಗ ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸದ್ಯ ಶಂಕಿತ ತುಮಕೂರಿನಿಂದ ಬಳ್ಳಾರಿಗೆ ತೆರಳಿರುವ ಅನುಮಾನವಿದೆ. ಅಲ್ಲಿಂದ ಬೀದರ್ ನತ್ತ ಪ್ರಯಾಣಿಸುತ್ತಿರುವ ಬಗ್ಗೆಯೂ ಶಂಕೆ ವ್ಯಕವಾಗಿದೆ. ಆತ ಹಿಂದಿ ಮಾತನಾಡುತ್ತಿದ್ದ ಹಾಗಾಗಿ ಆತ ಹೊರ ರಾಜ್ಯದವನಿರಬಹುದು ಎಂಬ ಬಗ್ಗೆಯೂ ಶಂಕಿಸಲಾಗಿದೆ. ಶಂಕಿತನ ಸ್ಪಷ್ಟವಾದ ಫೋಟೋಗಳು ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ.