ಇಂಡಿ: ರೈತರ ಸಾಲದ ಒನ್ ಟೈಮ್ ಸೆಟಲ್ಮೆಂಟ್ ಬಗ್ಗೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದೇನೆ. ಮೂರು ವರ್ಷದಿಂದ ಈ ಬಗ್ಗೆ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಸಂಸದ ರಮೇಶ್ ಜಿಗಜಿಣಗಿ ತಿಳಿಸಿದ್ದಾರೆ.
ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಉದ್ದಿಮೆದಾರರಿಗೆ ಬಡ್ಡಿ ಮನ್ನಾ ಮಾಡುತ್ತೀರಿ. ರೈತರು ಪಡೆದುಕೊಂಡ ಸಾಲದ ಬಡ್ಡಿ ಮನ್ನಾ ಮಾಡಿ ಅವರಿಗೆ ಸಾಲ ಕೊಡುವುದಿಲ್ಲ ಎಂದರೆ ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಇಡೀ ದೇಶದಲ್ಲಿ ಯಾರೂ ಕೂಡ ಒನ್ ಟೈಮ್ ಸೆಟಲ್ಮೆಂಟ್ ಬಗ್ಗೆ ಪ್ರಧಾನಿಗೆ ಪತ್ರ ಬರೆದಿಲ್ಲ. ನಾನು ಪತ್ರ ಬರೆದಿದ್ದು, ಇನ್ನು ನಾಲ್ಕು ವರ್ಷ ಅವಧಿ ಇದೆ. ಅಷ್ಟರೊಳಗೆ ಈ ಬಗ್ಗೆ ತೀರ್ಮಾನ ಕಂಡುಕೊಳ್ಳುತ್ತೇನೆ. ರೈತರ ಸಾಲದ ಒನ್ ಟೈಮ್ ಸೆಟ್ಟಲ್ಮೆಂಟ್ ಬಗ್ಗೆ ಹಣಕಾಸು ಸಚಿವರ ಮೇಲೆಯೂ ಒತ್ತಡ ತಂದಿದ್ದು, ಒಟಿಎಸ್ ಮಾಡಿಕೊಂಡ ರೈತರಿಗೆ ಮತ್ತೆ ಸಾಲ ಸಿಗುವಂತೆ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.