alex Certify ಮುಂದಿನ 2 ವರ್ಷಕ್ಕೆ ಬಿಎಸ್​ವೈ ಅವರೇ ಮುಖ್ಯಮಂತ್ರಿ: ರಮೇಶ್​ ಜಾರಕಿಹೊಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ 2 ವರ್ಷಕ್ಕೆ ಬಿಎಸ್​ವೈ ಅವರೇ ಮುಖ್ಯಮಂತ್ರಿ: ರಮೇಶ್​ ಜಾರಕಿಹೊಳಿ

ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡೋಕೆ ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕ್​ನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪರೇ ಮುಖ್ಯಮಂತ್ರಿ ಆಗಿರ್ತಾರೆ ಹಾಗೂ ಮುಂದಿನ ಚುನಾವಣೆಯನ್ನೂ ನಾವು ಯಡಿಯೂರಪ್ಪರ ಸಮ್ಮುಖದಲ್ಲೇ ಎದುರಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ನಾವು ಯಡಿಯೂರಪ್ಪ ಹಾಗೂ ಅಮಿತ್​ ಷಾರನ್ನ ನಂಬಿಯೇ ಬಿಜೆಪಿಗೆ ಬಂದಿದ್ದೇವೆ. ಬಿಜೆಪಿಯ ಎಲ್ಲಾ ಶಾಸಕರೂ ಒಂದು ಕುಟುಂಬದವರಂತೆ ಇದ್ದೇವೆ. ಯಡಿಯೂರಪ್ಪ ಎಲ್ಲರನ್ನೂ ಕರೆದು ಒಮ್ಮೆ ಮಾತನಾಡಬೇಕು ಎಂದು ನಾನು ಅವರಲ್ಲಿ ಮನವಿ ಮಾಡುತ್ತೇನೆ.

ಸಿ.ಪಿ ಯೋಗೀಶ್ವರ್​ ಈಗಲೂ ನನ್ನ ಸ್ನೇಹಿತ. ಮಾಧ್ಯಮಗಳ ಮೂಲಕ ನಾನು ಅವನಲ್ಲಿ ಮನವಿ ಮಾಡುಕೊಳ್ಳುತ್ತಿದ್ದೇನೆ. ಏನಾದರೂ ತಪ್ಪು ಗ್ರಹಿಕೆ ಆಗಿದ್ದಲ್ಲಿ ಕೂತು ಸರಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...