alex Certify BIG NEWS: 74 ಪರ್ಸೆಂಟ್ ಇರುವ ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು ಇಲ್ಲವಾದರೆ ಬಂಡಾಯ ಏಳುತ್ತೇನೆ: ರಮೇಶ್ ಜಾರಕಿಹೊಳಿ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 74 ಪರ್ಸೆಂಟ್ ಇರುವ ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು ಇಲ್ಲವಾದರೆ ಬಂಡಾಯ ಏಳುತ್ತೇನೆ: ರಮೇಶ್ ಜಾರಕಿಹೊಳಿ ಎಚ್ಚರಿಕೆ

ಬೆಳಗಾವಿ: ಹಿಂದುಳಿದ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡದಿದ್ದರೆ ನಾನು ಬಂಡಾಯ ಏಳುತ್ತೇನೆ ಎಂದು ಬಿಜೆಪಿ ಶಾಸಕ ರಮೇಶ್ ಜರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, 74 ಪರ್ಸೆಂಟ್ ಇರುವ ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು ಇಲ್ಲವಾದರೆ ಬಂಡಾಯ ಏಳುತ್ತೇನೆ. 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸುಮ್ಮನೆ ಇರುವವನಲ್ಲ ಎಂದು ಗುಡುಗಿದ್ದಾರೆ.

ನಮ್ಮ ಸರ್ಕಾರವಿರಲಿ, ಬೇರೆ ಸರ್ಕಾರವಿರಲಿ ಬೀಳಿಸುತೇನೆ. 2028ಕ್ಕೆ ನಾನು ಸುಮ್ಮನೆ ಕುಳಿತುಕೊಳ್ಳಲ್ಲ ಎಂದಿದ್ದಾರೆ.

ಈವರೆಗೆ ನಮಗೆ ಎಲ್ಲರೂ ಮೋಸ ಮಾಡಿದ್ದಾರೆ. ಕುರುಬರು, ಉಪ್ಪಾರ, ಸುಣಗಾರ ಸಮಾಜದವರು ಅಧಿಕರಕ್ಕೆ ಬರಬೇಕು. ಒಬಿಸಿಗಿಂತ ಎಸ್ ಟಿಗೆ ಹೆಚ್ಚಿನ ಪ್ರಮಾಣ ಬರಬೇಕು ಎಂಬುದು ನನ್ನ ಬೇಡಿಕೆ ಎಂದರು. ನನ್ನ ಜೊತೆ ಕೈ ಜೋಡಿಸಿ ಎಂದು ನಾನು ಸ್ವಾಮೀಜಿಗಳಿಗೆ ಹೇಳಿದ್ದೇನೆ.

ಕಾಂಗ್ರೆಸ್ ನಲ್ಲಿ 5 ಬಾರಿ, ಬಿಜೆಪಿಯಲ್ಲಿ ಎರಡು ಬಾರಿ ಶಾಸಕನಾಗಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ಯಾವುದೇ ರೀತಿ ಕೆಟ್ಟದ್ದನ್ನು ಮಾಡಿಲ್ಲ. ಆದರೆ ಒಬ್ಬ ವ್ಯಕ್ತಿಯಿಂದಾಗಿ ಪಕ್ಷ ಬಿಟ್ಟೆ. ಎಲ್ಲರೂ ಸೇರಿ ಷಡ್ಯಂತ್ರ ಮಾಡಿದ್ದರಿಂದ ಕಾಂಗ್ರೆಸ್ ನಿಂದ ಹೊರಬಂದೆ. ಬಿಜೆಪಿಯಲ್ಲಿ ಬೆಳೆಯುತ್ತಿದ್ದಂತೆ ಎಲ್ಲರೂ ಷಡ್ಯಂತ್ರ ಮಾಡಿದರು ಅದಕ್ಕೂ ನಾನು ಹೆದರಿಲ್ಲ ಎಂದು ಕಿಡಿಕಾರಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...