ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯೊಂದಿಗೆ ಮಾಜಿ ಸಚಿವ ಡಿ. ಸುಧಾಕರ್ ಸಂಪರ್ಕದಲ್ಲಿದ್ದರು. ಹಣದ ವ್ಯವಹಾರ ನಡೆಸಿದ್ದರು ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಕೇಳಿಬಂದ ಆರೋಪ ಅಲ್ಲಗಳೆದ ಮಾಜಿ ಸಚಿವ ಸುಧಾಕರ್ ಅವರು, ನಾನು ಯಾವುದೇ ಯುವತಿಯೊಂದಿಗೆ ಸಂಪರ್ಕ ಹೊಂದಿಲ್ಲ. ಯಾವುದೇ ಹಣಕಾಸು ವ್ಯವಹಾರ ನಡೆಸಿಲ್ಲ ಎಂದು ಹೇಳಿದ್ದಾರೆ.
ಯಾವುದೇ ದಾಖಲೆ ಇಲ್ಲದೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಯುವತಿ ಕಾಲ್ ಲೀಸ್ಟ್ ನಲ್ಲಿ ನನ್ನ ನಂಬರ್ ಇರಬಹುದು. ನನಗೆ ನೂರಾರು ಜನ ಕರೆ ಮಾಡುತ್ತಾರೆ. ಆದರೆ ಹಣದ ವ್ಯವಹಾರ ಎನ್ನುವುದು ಸರಿಯಲ್ಲ. ನನಗೆ ಯಾವುದೇ ಮಾಹಿತಿ ಇಲ್ಲ. ಎಸ್ಐಟಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ನನಗೆ ನೋಟಿಸ್ ಬಂದರೆ ಉತ್ತರ ಕೊಡುತ್ತೇನೆ. ನಾನು ಹಣ ವರ್ಗಾವಣೆ ಮಾಡಿರುವುದಕ್ಕೆ ಸಾಕ್ಷಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.