ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮಾತ್ರವಲ್ಲದೆ, ಮತ್ತೊಬ್ಬ ಜನಪ್ರತಿನಿಧಿ ಕೂಡ ಯುವತಿಯ ಬಲೆಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ರಮೇಶ್ ಜಾರಕಿಹೊಳಿ ಅವರಿಗಿಂತ ಮೊದಲೇ ಮತ್ತೊಬ್ಬ ನಾಯಕ ಯುವತಿಯೊಂದಿಗೆ ಸಂಪರ್ಕದಲ್ಲಿದ್ದರು. ಯುವತಿ ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಾಳೆನ್ನಲಾಗಿದೆ.
ಮಾಜಿ ಸಚಿವ ಸುಧಾಕರ್ ಅವರು ಯುವತಿ ಸಂಪರ್ಕದಲ್ಲಿದ್ದರು. ಎಸ್ಐಟಿ ತನಿಖೆ ಕೈಗೊಂಡ ಸಂದರ್ಭದಲ್ಲಿ ಲಾಕ್ ಡೌನ್ ವೇಳೆ ಯುವತಿ ಸುಧಾಕರ್ ಅವರೊಂದಿಗೆ ಮಾತನಾಡಿದ್ದು, ಇಬ್ಬರ ನಡುವೆ ಹಣಕಾಸು ವ್ಯವಹಾರ ನಡೆದ ಮಾಹಿತಿ ಗೊತ್ತಾಗಿದೆ. ಹನಿಟ್ರ್ಯಾಪ್ ಆರೋಪವೂ ಕೇಳಿ ಬಂದಿದೆ. ಸುಧಾಕರ್ ಅವರೊಂದಿಗೆ ಯುವತಿ 35 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ ಮಾಹಿತಿ ಕಾಲ್ ಡಿಟೇಲ್ಸ್ ನಲ್ಲಿ ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ.