ತಮ್ಮ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಅಸಭ್ಯ ಪದ ಬಳಕೆ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ನಿವಾಸದ ಬಳಿ ಮಾತನಾಡಿದ ಡಿ.ಕೆ. ಶಿವಕುಮಾರ್, ನನ್ನ ಹೆಸರನ್ನು ಪ್ರಸ್ತಾಪ ಮಾಡಲಿ ಬಿಡಿ. ಯುವತಿ ಪೋಷಕರಾದರು ಹೇಳಲಿ, ಯಾರಾದರೂ ಹೇಳಲಿ. ಎಸ್ಐಟಿ ರಚನೆಯಾಗಿದೆ. ತನಿಖೆಯಾಗಲಿ ಬಿಡಿ ಎಂದು ತಿಳಿಸಿದ್ದಾರೆ.
ಕಾನೂನು ಇದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಅವಾಚ್ಯ ಪದ ಬಳಕೆ ವಿಚಾರ ಸಂಬಂಧಿಸಿದಂತೆ ಅವರ ಸಂಸ್ಕೃತಿ ಅವರು ಮಾತನಾಡುತ್ತಾರೆ. ಕನಕಪುರದಲ್ಲಿ ಸ್ಪರ್ಧಿಸುವುದಾದರೆ ಒಳ್ಳೆಯದಾಗಲಿ. ಬಹಳ ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಯುವತಿ ನನ್ನ ಬಳಿಗೆ ಬಂದಿಲ್ಲ. ನನ್ನನ್ನು ಭೇಟಿಯಾಗಿಲ್ಲ. ನನಗೆ ಸಹಾಯ ಮಾಡುವಂತೆ ಮಾಧ್ಯಮಗಳ ಮೂಲಕ ಕೇಳಿಕೊಂಡಿದ್ದಾಳೆ ಅಷ್ಟೇ. ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಮಹಾನಾಯಕ ಶೋ ಮ್ಯಾನ್ ಅವಾಚ್ಯವಾಗಿ ಮಾತನಾಲಿ. ಏನು ಬೇಕಾದರೂ ಹೇಳಿಕೊಳ್ಳಲಿ. ಕೇಸ್ ದಾಖಲಿಸಿಕೊಳ್ಳಲಿ. ಸರ್ಕಾರ ತೆಗೆಯುವ ಮತ್ತು ಹುಟ್ಟು ಹಾಕುವ ಶಕ್ತಿ ಅವರಿಗಿದೆ. ಸಿಡಿಯಲ್ಲಿರುವ ಯುವತಿ ನನ್ನನ್ನು ಭೇಟಿಯಾಗಿಲ್ಲ ಎಂದು ತಿಳಿಸಿದ್ದಾರೆ.