ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಇಂದು ದೂರು ನೀಡಲಿದ್ದಾರೆ. ಸದಾಶಿವನಗರ ಠಾಣೆಗೆ ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆ ನಂತರ ದೂರು ನೀಡಲಿದ್ದಾರೆ.
ಇಂದು ಕೂಡ ಆಡಿಯೋ-ವಿಡಿಯೋ ಮುಂದುವರೆಯುವ ಜೊತೆಗೆ ಮಹತ್ವದ ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಮತ್ತೆರಡು ಆಡಿಯೋ ಬಾಂಬ್ ಸಿಡಿಸಲಿದ್ದಾರೆ. ಕಿಂಗ್ ಪಿನ್ ಗಳು ಮತ್ತು ಮಹಾನಾಯಕನ ಜೊತೆಗೆ ಯುವತಿ ಆಡಿಯೋ ರಿಲೀಸ್ ಮಾಡಲಿದ್ದಾರೆ. ಅಲ್ಲದೇ ಯುವತಿ ವಿಡಿಯೋ ಹೇಳಿಕೆಗೆ ಕೌಂಟರ್ ಆಗಿ ಆಡಿಯೋ ಅಸ್ತ್ರ ಪ್ರಯೋಗಿಸಲಿದ್ದಾರೆ ಎನ್ನಲಾಗಿದೆ.