ಬಳ್ಳಾರಿ: ನಮ್ಮದು ಯತ್ನಾಳ್ ಬಣವಲ್ಲ, ಬಿಜೆಪಿ ಬಣ. ಯಾವುದೇ ಬಣಗಳಿಲ್ಲ. ಇರುವುದೊಂದೆ ಬಿಜೆಪಿ ಬಣ ಎಂದು ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ವಕ್ಫ್ ವಿವಾದ ವಿಚಾರವಾಗಿ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದೆ. ನಮ್ಮದು ಯತ್ನಾಳ್ ಬಣವಲ್ಲ, ಇರೋದೊಂದೇ ಬಣ ಬಿಜೆಪಿ ಬಣ. ನಾವು ಹೋರಾಟ ಮಾಡಿದ ಮೇಲೆ ಎಲ್ಲರೂ ಬಂದರು. ಬಿಜೆಪಿ ಸಮಿತಿ ಬಂತು, ಎಲ್ಲವೂ ಬಂತು ಎಂದರು.
ವಕ್ಫ್ ಬೋರ್ಡ್ ವಿಚಾರವಾಗಿ ಎರಡನೇ ಹಂತದ ಹೋರಾಟ ಕೂದ ಮಾಡುತ್ತೇವೆ. ಜ.4ರಂದು ಬಳ್ಳಾರಿಯ ಕಂಪ್ಲಿಯಲ್ಲಿ ಸಮಾವೇಶ ಮಾಡುತ್ತೇವೆ. ಜ.6ರಂದು ಹೋರಾಟ ನಡೆಸುತ್ತೇವೆ. ವರ್ಕ್ಫ್ ಕಾಯ್ದೆ ಸಂಪೂರ್ಣವಾಗಿ ತೊಲಗಬೇಕು ಎಂದು ಹೋರಾಟ ಮಾಡುತ್ತೇವೆ ಎಂದರು.