ಬೆಂಗಳೂರು: ನಮ್ಮ ವಕೀಲರು ಏನೂ ಮಾತನಾಡಬೇಡ ಎಂದು ಹೇಳಿದ್ದಾರೆ. ನಾಳೆ ಸಂಜೆ 4 ರಿಂದ 6 ಗಂಟೆಯವರೆಗೆ ಎಲ್ಲ ವಿಷಯವನ್ನು ಬಹಿರಂಗಪಡಿಸುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಯಾವ ಆಡಿಯೋ ವಿಚಾರದ ಬಗ್ಗೆಯೂ ನನಗೆ ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಗೆ ಒಳ್ಳೆಯದಾಗಬೇಕು. ನನ್ನ ಕಷ್ಟ, ಸುಖದಲ್ಲಿ ಕೂಡಿ ಬಂದವ ಡಿ.ಕೆ. ಶಿವಕುಮಾರ್. ನಾನು ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ. ನಾನು ನಿರಪರಾಧಿ ಎಂದು ತಿಳಿಸಿದ್ದಾರೆ.
ಎಫ್ಐಆರ್ ದಾಖಲಾದ ಕೂಡಲೇ ನಾನು ಆರೋಪಿಯಲ್ಲ. ನಾನು ಜಾಮೀನು ಪಡೆಯುವುದಿಲ್ಲ. ನಾಳೆ ಇದಕ್ಕಿಂತ ದೊಡ್ಡ ಬಾಂಬ್ ಇದೆ. ನಾಳೆ ಸಂಜೆ 4 ರಿಂದ 6 ಗಂಟೆಗೆ ದೊಡ್ಡ ಸುದ್ದಿ ಸ್ಪೋಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸಿಡಿ ಲೇಡಿ ಮಾತನಾಡಿದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಆಡಿಯೋ ಬಗ್ಗೆ ನನಗೇನು ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ನನ್ನ ಹಳೆಯ ಸ್ಣೇಹಿತ. ನನ್ನಂತೆ ಅವರು ರಾಜೀನಾಮೆ ಕೊಡಬಾರದು. ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಹೇಳಿದ್ದಾರೆ.