ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆಂಡಾಮಂಡಲರಾಗಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಮಹಾನಾಯಕ ಯಾರು ಎನ್ನುವುದು ಬಯಲಾಗಿದೆ. ಮಹಾನಾಯಕನ ಹೆಸರನ್ನು ನಾನು ಹೇಳಿಲ್ಲ. ಯುವತಿಯ ಪೋಷಕರು ಹೇಳಿದ್ದಾರೆ. ಆ ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್ ಎಂದು ಅವನು ಗಂಡಸಲ್ಲ ಎಂದು ರಮೇಶ್ ಜಾರಕಿಹೊಳಿ ಟೀಕಿಸಿದ್ದಾರೆ.
ನಾನು ಡಿಕೆಶಿ ವಿರುದ್ಧ ಕಂಪ್ಲೆಂಟ್ ಕೊಡುತ್ತೇನೆ. ಕನಕಪುರದಲ್ಲಿ ನಾನು ನೇರವಾಗಿ ಅವರ ವಿರುದ್ಧ ಹೋರಾಡುತ್ತೇನೆ. ಬೆಳಗಾವಿಗೆ ಡಿ.ಕೆ. ಶಿವಕುಮಾರ್ ಬಂದರೆ ಸ್ವಾಗತ ಕೋರುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಷಡ್ಯಂತ್ರದಲ್ಲಿ ಮಹಾನಾಯಕ ಇಲ್ಲ ಎಂದುಕೊಂಡಿದ್ದೆ. ನನ್ನ ಬಳಿ 11 ಸಾಕ್ಷ್ಯಗಳಿವೆ. ಅವುಗಳನ್ನು ಎಸ್ಐಟಿಗೆ ಕೊಡುತ್ತೇನೆ. ಆತ ರಾಜಕೀಯದಿಂದ ನಿವೃತ್ತಿ ಹೊಂದಲಿ. ಡಿಕೆಶಿ ವಿರುದ್ಧ ಸಿಡಿದೆದ್ದ ರಮೇಶ್ ಜಾರಕಿಹೊಳಿ ನಾನು ನಿರಪರಾಧಿ ಎನ್ನುವುದು ಸಾಬೀತಾಗಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುತ್ತೇನೆ ಎಂದು ಗುಡುಗಿದ್ದಾರೆ.