ರಾಮನಗರ: 7 ಮಂಗಗಳನ್ನು ಕೊಂದು ಮೂಟೆ ಕಟ್ಟಿ ಅದನ್ನು ರಸ್ತೆ ಬದಿ ಕಿಡಿಗೇಡಿಗಳು ಎಸೆದು ಹೋಗಿರುವ ಅಮಾನವೀಯ ಘಟನೆ ರಾಮನಗರ ಜಿಲ್ಲೆಯ ಯಲಚವಾಡಿಯಲ್ಲಿ ನಡೆದಿದೆ.
ರಸ್ತೆ ಬಳಿ ಬಿದ್ದಿರುವ ಮೂಟೆಯನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದಾಗ 7 ಮಂಗಳ ಕಳೇಬರ ಪತ್ತೆಯಾಗಿದೆ. ಆತಂಕಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎನ್ನಲಾಗಿದೆ.
ಮಂಗಗಳ ಕತ್ತಿನ ಭಾಗದಲ್ಲಿ ರಕ್ತದ ಕಲೆಗಳಿವೆ. 7 ಮಂಗಗಳಲ್ಲಿ ಒಂದು ಮರಿ ಮಂಗವಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸದಿದ್ದಾಗ ಸ್ಥಳೀಯರೇ ಮೃತ ಮಂಗಗಳಿಗೆ ಪೂಜೆ ಸಲ್ಲಿಸಿ ರಸ್ತೆ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಮಂಗಗಳ ಮಾರಣಹೋಮಕ್ಕೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು? ಎಂಬುದು ಸ್ಥಳೀಯರ ಪ್ರಶ್ನೆ