
ರಾಮನಗರ: 40 ವಕೀಲರ ವಿರುದ್ಧ ದೂರು ದಾಖಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಪೊಲೀಸರ ವಿರುದ್ಧ ಸಿಡಿದೆದ್ದಿದ್ದು, ರಾಮನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ.
ರಾಮನಗರದ ಐಜೂರು ಸರ್ಕಲ್ ಬಳಿ 300ಕ್ಕೂ ಹೆಚ್ಚು ವಕೀಲರು ಪ್ರತಿಭಟನೆ ನಡೆಸಿದ್ದು, ವಕೀಲರ ವಿರುದ್ಧ ದೂರು ದಾಖಲು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಸ್ ಐ ತನ್ವೀರ್ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.
ಅಲ್ಲದೇ ರಾಮನಗರ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.