
ರಾಮನಗರ: ಯುವತಿಯರ ಫೋಟೋ ತೆಗೆಯುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಯುವಕನೊಬ್ಬನನ್ನು ದೊಣ್ಣೆಯಿಂದ ಹೊಡೆದು ಕೊಂದಿರುವ ಘಟನೆ ರಾಮನಗರ ಜಿಲ್ಲೆಯ ಚಿಕ್ಕೇನಹಳ್ಳಿ ಫಾರ್ಮ್ ಹೌಸ್ ನಲ್ಲಿ ನಡೆದಿದೆ.
ಬೆಂಗಳೂರು ಮೂಲದ ಯುವಕ ಪುನೀತ್ (21) ಮೃತ ಯುವಕ. ಪುನೀತ್ ಹಾಗೂ ಸ್ನೇಹಿತರು ಚಿಕ್ಕೇನಹಳ್ಳಿ ಬಳಿಯ ಹೋಂ ಸ್ಟೇನಲ್ಲಿ ತಂಗಿದ್ದರು. ಈ ವೇಳೆ ಕೆಲವರು ಯುವತಿಯರ ಫೋತೋ ತೆಗೆಯುತ್ತಿದ್ದರು. ಇದನ್ನು ಪುನೀತ್ ಪ್ರಶ್ನಿಸಿದ್ದ. ಇದರಿಂದ ಕೋಪಗೊಂಡ ಕೆಲ ಯುವಕರ ಗುಂಪು ಪುನೀತ್ ಮೇಲೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.
ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಪುನೀತ್ ನನ್ನು ಕೆಂಗೇರಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಗದೇ ಯುವಕ ಸಾವನ್ನಪ್ಪಿದ್ದಾನೆ. ಯುವಕನ ಮೇಲೆ ಹಲ್ಲೆನಡೆಸಿರುವ ಭೀಕರ ದೃಶ್ಯ ಹೋಂ ಸ್ಟೇನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.