ಬೆಂಗಳೂರು: ಸಾರಿಗೆ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಮುಜರಾಯಿ ಇಲಾಖೆಯ ಧಾರ್ಮಿಕ ಪರಿಷತ್ ಅನ್ನು ಹೊಸದಾಗಿ ರಚನೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯ 8 ಮಂದಿ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡ ಧಾರ್ಮಿಕ ಪರಿಷತ್ ರಚನೆ ಮಾಡಲಾಗಿದೆ.
ರಾಮಲಿಂಗಾರೆಡ್ಡಿ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ(ಮುಜರಾಯಿ), ಪದನಿಮಿತ್ತ ಕಾರ್ಯದರ್ಶಿಯಾಗಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನು ನೇಮಿಸಲಾಗಿದೆ.
ಜಿಲ್ಲಾ ನ್ಯಾಯಾಧೀಶ ಎನ್. ಶ್ರೀವತ್ಸ ಕೆದಿಲಾಯ ನ್ಯಾಯಿಕ ಸದಸ್ಯರಾಗಿರುತ್ತಾರೆ. ಡಾ. ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು, ಬಿ.ಎಸ್. ದ್ವಾರಕನಾಥ್, ಡಾ.ಎ. ರಾಧಾಕೃಷ್ಣರಾಜು, ಕೆ.ಎಂ. ನಾಗರಾಜು, ಡಾ. ಮಹಾಂತೇಶ್ ಶಾಸ್ತ್ರಿ, ಮಲ್ಲಿಕಾ ಪ್ರಶಾಂತ ಪಕ್ಕಲಾ, ಚಂದ್ರಶೇಖರ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಧಾರ್ಮಿಕ ಪರಿಷತ್ ಗೆ ನೇಮಕ ಮಾಡಲಾಗಿದೆ.