ಬೆಂಗಳೂರು: 2019ರ ಏಪ್ರಿಲ್ ಗಿಂತ ಮೊದಲು ನೋಂದಣಿಯಾದ ಎರಡು ಕೋಟಿ ವಾಹನಗಳು ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಮಧು ಜಿ. ಮಾದೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿ 17ರವರೆಗೆ ವಾಹನ ಮಾಲೀಕರಿಗೆ ಗಡುವು ನೀಡಲಾಗಿದ್ದರೂ ಇದುವರೆಗೆ 18.32 ಲಕ್ಷ ವಾಹನಗಳು ಮಾತ್ರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿವೆ ಶೇಕಡ 9.16 ರಷ್ಟು ವಾಹನಗಳು ಮಾತ್ರ ಸರ್ಕಾರದ ಆದೇಶ ಪಾಲಿಸಿದೆ ಎಂದು ತಿಳಿಸಿದ್ದಾರೆ.
ಹೆಚ್ಎಸ್ಆರ್ಪಿ ನೋಂದಣಿ ಫಲಕ ಅಳವಡಿಕೆ ಪ್ರಮಾಣ ತೀರಾ ಕಡಿಮೆ ಇರುವುದರಿಂದ ಗಡುವನ್ನು ಮೂರು ತಿಂಗಳು ಮೇ 17ರವರೆಗೆ ವಿಸ್ತರಿಸಲು ನಿರ್ಧರಿಸಿದ್ದು, ಶೀಘ್ರದಲ್ಲೇ ಆದೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ.