ಬೆಂಗಳೂರು: ಕಾರ್ ಪೂಲಿಂಗ್ ಬಗ್ಗೆ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಆ್ಯಪ್ ಆಧಾರಿತ ಕಾರ್ ಪೂಲಿಂಗ್ ಸೇವೆ ನೀಡುತ್ತಿರುವ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವರು, ಬೆಂಗಳೂರು ನಗರದಲ್ಲಿ ಕಾರ್ ಪೂಲಿಂಗ್ ಗೆ ಅವಕಾಶ ನೀಡುವ ಬಗ್ಗೆ ಅಥವಾ ಅನುಮತಿ ಹಿಂಪಡೆಯುವ ಕುರಿತಾಗಿ ಮುಂದಿನ 10 ದಿನಗಳ ಒಳಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದುವರೆಗೆ ಕಾರ್ ಪೂಲಿಂಗ್ ಸೇವೆಗೆ ನಿಷೇಧ ಹೇರಿಲ್ಲ. ಆದರೆ, ವೈಟ್ ಬೋರ್ಡ್ ಹೊಂದಿದ ವಾಣಿಜ್ಯೇತರ ವಾಹನಗಳು ಕಾರ್ ಪೂಲಿಂಗ್ ಗೆ ಬಳಕೆ ಮಾಡುವುದಕ್ಕೆ ನಿಯಂತ್ರಣ ಹೇರಬೇಕಿದೆ. ಮುಂದಿನ 10 ದಿನಗಳೊಳಗೆ ನಗರದಲ್ಲಿ ಕಾರ್ ಪೂಲಿಂಗ್ ಗೆ ಅವಕಾಶ ನೀಡುವುದು ಅಥವಾ ಅನುಮತಿ ಹಿಂಪಡೆಯುವ ಕುರಿತಾಗಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.