ಬೆಂಗಳೂರು : ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೀಡುವ ಮಹಿಳೆಯರಿಗೆ ಉಚಿತ ಬಸ್ ಸೇವೆ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಮಹಿಳೆಯರು ಉಚಿತ ಬಸ್ ಸೇವೆಗೆ ಮುಗಿಬಿದ್ದಿದ್ದು, ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಂಗುಡಿ ಇಡುತ್ತಿದ್ದಾರೆ. ಬಸ್ ಹತ್ತಲು ಮಹಿಳೆಯರು ಮುಗಿಬೀಳುತ್ತಿದ್ದು, ಬಸ್ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ.
ಈ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಹಿಳೆಯರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಉಚಿತ ಪ್ರಯಾಣದ ಯೋಜನೆ ’10 ವರ್ಷ ಇರುತ್ತೆ, ಎಲ್ಲರೂ ಪ್ಲಾನ್ ಮಾಡಿಕೊಂಡು ಓಡಾಡಿ. ಒಂದೇ ದಿನ ಎಲ್ಲರೂ ಓಡಾಡಬೇಡಿ ಎಂದು ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ.
ಎಲ್ಲರೂ ಒಂದೇ ಬಾರಿಗೆ ಹೋಗುವುದರಿಂದ ಜನದಟ್ಟಣೆ ಆಗ್ತಿದೆ. ಇನ್ನು 10 ವರ್ಷ ಇದೇ ಯೋಜನೆ ಇರುತ್ತೆ. ಎಲ್ಲರೂ ಒಂದೇ ದಿನ ಹೋಗಬೇಡಿ.. ಇದರಿಂದ ಬಸ್ ನ ಸಿಬ್ಬಂದಿಗಳಿಗೆ ಟಿಕೆಟ್ ನೀಡಲು ಬಹಳ ತೊಂದರೆಯಾಗುತ್ತಿದೆ. ಬರೋಬ್ಬರಿ ಸುಮಾರು 3 ಕೋಟಿ ಜನ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕೆಲವು ಪ್ರಯಾಣಿಕರು ಕಿಟಕಿ ಗಾಜುಗಳನ್ನೇ ಒಡೆದು ಒಳನುಗ್ಗುವ ಯತ್ನ ನಡೆಸಿದ್ದಾರೆ. ಉಚಿತ ಎಂಬ ಕಾರಣಕ್ಕೆ ಮಹಿಳೆಯರು ಯಾತ್ರಾ ಸ್ಥಳಗಳಿಗೆ ಅಧಿಕ ಸಂಖ್ಯೆಯಲ್ಲಿ ತೆರಳುತ್ತಿರುವುದರಿಂದ ಬಸ್ಗಳಲ್ಲಿ ನೂಕುನುಗ್ಗಲು ಹೆಚ್ಚಾಗಿದೆ.