
ಬೆಂಗಳೂರು: ಜನವರಿ 22ರಂದು ನಾಳೆ ರಾಜ್ಯ ಸರ್ಕಾರ ರಜೆಯನ್ನು ಘೋಷಣೆ ಮಾಡಲೇಬೇಕು ಎಂದು ನಾನು ಒತ್ತಾಯಿಸುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾಳೆ ಕೋಟ್ಯಂತರ ಭಾರತೀಯರ ನೂರಾರು ವರ್ಷಗಳ ಕನಸು ನನಸಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದೆ. ಇದೀ ದೇಶದ ಜನರು ರಮನಾಮ ಜಪದಲ್ಲಿ ತೊಡಗಿದ್ದಾರೆ. ನಾಲೆ ರಜೆ ನೀಡುವಂತೆ ರಾಜ್ಯದ ಜನರು ಮನವಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ರಜೆಯನ್ನು ಘೋಷಣೆ ಮಾಡಬೇಕು ಎಂದರು.
ದೇಶದ ಜನರು ಹಬ್ಬದ ಸಂಭ್ರಮದಲ್ಲಿದ್ದಾರೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ನೋಡಲು ಕಾತರರಾಗಿದ್ದಾರೆ. ಹಾಗಾಗಿ ಅವರ ಭಾವನೆಗೆ ಗೌರವ ಕೊಟ್ಟು ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಬೇಕು. ಮನೆಯಿಂದಲೇ ಅವರೂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕೊಡಬೇಕು. ಈಗಾಗಲೇ ಹಲವು ರಾಜ್ಯಗಳು ನಾಳೆ ಸರ್ಕಾರಿ ರಜೆ ಘೋಷಣೆ ಮಾಡಿವೆ. ಇಲ್ಲಿ ಪಕ್ಷಕ್ಕಿಂತ ಜನರ ಭಾವನೆಗಳು ಮುಖ್ಯ. ಪ್ರತಿಯೊಂದು ಕುಟುಂಬ ರಾಮ ಮಂದಿರ ಉದ್ಗಾಟನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಹಾಗಾಗಿ ರಜೆ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.
ನಾನೂ ಕೂಡ ಅಯೋಧ್ಯೆಗೆ ಹೋಗುತ್ತಿದ್ದೇನೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಭಾಗವಹಿಸುತ್ತಿದ್ದೇವೆ ಎಂದು ಹೇಳಿದರು.