ನವದೆಹಲಿ: ಅಯೋಧ್ಯ ರಾಮಮಂದಿರ ನಿರ್ಮಾಣಕ್ಕೆ ದೇಶದಲ್ಲಿ 10 ಕೋಟಿ ಕುಟುಂಬದಿಂದ ದೇಣಿಗೆ ಸಂಗ್ರಹಿಸಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಪಶ್ಚಿಮಬಂಗಾಳದಲ್ಲಿ ದೇಣಿಗೆ ಸಂಗ್ರಹಕ್ಕೆ ತೊಂದರೆ ಆಗಿಲ್ಲ. ತಮಿಳುನಾಡಿನಲ್ಲಿ ಮಾತ್ರ ದೇಣಿಗೆ ಸಂಗ್ರಹಕ್ಕೆ ಅಡ್ಡಿಯಾಗಿತ್ತು. ಉತ್ತರ ಪ್ರದೇಶಕ್ಕಿಂತ ರಾಜಸ್ಥಾನದಲ್ಲಿ ಹೆಚ್ಚಿನ ದೇಣಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡು, ಕೇರಳದಲ್ಲಿ ಮಹತ್ವದ ದೇಣಿಗೆ ನೀಡಿದ್ದಾರೆ. ಮನೆಮನೆಗೆ ತೆರಳಿ ದೇಣಿಗೆ ಸಂಗ್ರಹಿಸುವುದನ್ನು ನಿಲ್ಲಿಸಲಾಗಿದೆ. ಪ್ರಸ್ತುತ ವೆಬ್ ಸೈಟ್ನಲ್ಲಿ, ಆನ್ಲೈನ್ನಲ್ಲಿ ದೇಣಿಗೆ ನೀಡಬಹುದು ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.