ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವ ಸಾಧ್ಯತೆಯನ್ನು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸೂಚಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಪಟೇಲ್, “ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕೆಂಬ ಬೇಡಿಕೆಗಳು ಇವೆ. ವೈಯಕ್ತಿಕ ಮಟ್ಟದಲ್ಲಿ, ನಮ್ಮ ಬಳಿ ಇರುವ ಜ್ಞಾನವನ್ನು ಆಧರಿಸಿ ಹೇಳುವುದಾದರೆ, ರಾಮ ಸೇತುವನ್ನ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು. ಈ ಬಗ್ಗೆ ಆಳವಾದ ಸಂಶೋಧನೆಯ ಅಗತ್ಯವಿದ್ದು, ಅದಾಗಲೇ ಚಾಲ್ತಿಯಲ್ಲಿದೆ” ಎಂದಿದ್ದಾರೆ.
ರಾಜ್ಯಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ
ರಾಮೇಶ್ವರ ಬಳಿಯ ಪಾಂಬನ್ ಸೇತು ಬಳಿಯಿಂದ ಆರಂಭವಾಗುವ ರಾಮ ಸೇತು, ಶ್ರೀಲಂಕಾದ ಉತ್ತರ ಭಾಗದಲ್ಲಿರುವ ಮನ್ನಾರ್ ದ್ವೀಪದವರೆಗೂ ಹಬ್ಬಿದೆ.
ಕಪಿಸೇನೆಯ ನೆರವಿನಿಂದ ಶ್ರೀರಾಮ ಚಂದ್ರರು ಈ ಸೇತುವೆ ನಿರ್ಮಾಣ ಮಾಡಿ, ರಾವಣನಿಂದ ತಮ್ಮ ಮಡದಿಯನ್ನು ರಕ್ಷಿಸಿ ಕರೆತರಲು ಲಂಕೆಗೆ ದಾರಿ ಮಾಡಿಕೊಂಡರು ಎಂಬ ಕಾರಣಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಈ ಸೇತುವೆಗೆ ಭಾರೀ ಮಹತ್ವವಿದೆ.
https://twitter.com/ScienceChannel/status/940259901166600194?ref_src=twsrc%5Etfw%7Ctwcamp%5Etweetembed%7Ctwterm%5E940259901166600194%7Ctwgr%5E%7Ctwcon%5Es1_&ref_url=http%3A%2F%2Ftimesofindia.indiatimes.com%2Findia%2Fram-setu-likely-to-be-declared-a-national-monument%2Farticleshow%2F83838876.cms