ಅಯೋಧ್ಯೆ : ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ದೇವಾಲಯದ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲಿದ್ದಾರೆ ಮತ್ತು ಇಂದು ನಡೆಯಲಿರುವ ಪ್ರತಿಷ್ಠಾಪನಾ ಸಮಾರಂಭಕ್ಕೆ ನಗರವು ಸಜ್ಜಾಗಿದೆ. ಸಮಾರಂಭದ ಮರುದಿನ ಅಂದರೆ ಜನವರಿ 23 ರಂದು ಈ ದೇವಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಗುವುದು.
ಪ್ರತಿಷ್ಠಾಪನಾ ಸಮಾರಂಭವು ಮಧ್ಯಾಹ್ನ 12.20 ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನಂತರ, ಪ್ರಧಾನಿ ಮೋದಿ ಅವರು ಸಂತರು ಮತ್ತು ಗಣ್ಯ ವ್ಯಕ್ತಿಗಳು ಸೇರಿದಂತೆ 7,000 ಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅತಿಥಿಗಳು ಆರತಿ ಸಮಯದಲ್ಲಿ ಗಂಟೆ ಬಾರಿಸಲಿದ್ದಾರೆ. ಬಳಿಕ ಪ್ರಾಣಪ್ರತಿಷ್ಠಾಪನೆ ವೇಳೆ ಹೆಲಿಕಾಪ್ಟರ್ ಮೂಲಕ ರಾಮಮಂದಿರದ ಮೇಲೆ ಹೂಮಳೆ ಸುರಿಸಲಿವೆ.
ಈಗಾಗಲೇ ಸ್ಯಾಂಡಲ್ ವುಡ್ ನಟ ಯಶ್ ದಂತಪಿ, ಕಂಗನಾ ರನೌತ್, ಶೆಫಾಲಿ ಶಾ, ಪವನ್ ಕಲ್ಯಾಣ್ ಮತ್ತು ರಣದೀಪ್ ಹೂಡಾ ಅವರು ಭವ್ಯ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಲು ಅಯೋಧ್ಯೆಗೆ ತಲುಪಿದ್ದಾರೆ.