ನವದೆಹಲಿ : ಶ್ರೀ ರಾಮ್ ಜನ್ಮಭೂಮಿ ನಗರದ ಭವ್ಯವಾದ ರಾಮ ಮಂದಿರವು ಜನವರಿ 23 ರಿಂದ (ನಾಳೆ) ಸಾರ್ವಜನಿಕರಿಗೆ ತೆರೆಯಲು ಸಜ್ಜಾಗಿದೆ.
ರಾಮ್ ಲಲ್ಲಾ ವಿಗ್ರಹದ ಐತಿಹಾಸಿಕ ‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದ್ದಾರೆ.
ಜನವರಿ 23, 2024 ರಿಂದ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಬಹುದು.ಜನರು ಬೆಳಿಗ್ಗೆ 7 ರಿಂದ ರಾತ್ರಿ 11:30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 7 ರವರೆಗೆ ಪ್ರಾರ್ಥನೆ ಸಲ್ಲಿಸಬಹುದು. ದೇವಾಲಯದಲ್ಲಿ ಆರತಿ ಎರಡು ಬಾರಿ ನಡೆಯಲಿದೆ. ಒಂದು ಬೆಳಿಗ್ಗೆ 6:30 ಕ್ಕೆ ಮತ್ತು ಎರಡನೆಯದು ಸಂಜೆ 7:30 ಕ್ಕೆ ನಡೆಯಲಿದೆ. ಭಕ್ತರು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಆರತಿಗಾಗಿ ಪಾಸ್ ಗಳನ್ನು ಪಡೆಯಬಹುದು.
ರಾಮ ಮಂದಿರ ಆರತಿ ದರ್ಶನಕ್ಕೆ ಪಾಸ್ ಪಡೆಯುವುದು ಹೇಗೆ?
ಭಕ್ತರು ಅಯೋಧ್ಯಾ ರಾಮ ಮಂದಿರ ಜಾಲತಾಣಕ್ಕೆ ಲಾಗಿನ್ ಆಗಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.
ಲಾಗಿನ್ ಆದ ನಂತರ, ಭಕ್ತರು ಆರತಿ ಅಥವಾ ದರ್ಶನಕ್ಕಾಗಿ ಸಮಯವನ್ನು ಆಯ್ಕೆ ಮಾಡಬಹುದು. ವೆಬ್ಸೈಟ್ನಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಸಲ್ಲಿಸಿ. ಬಳಿಕ ಮೈ ಪ್ರೊಫೈಲ್ ಸೆಕ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಬೇಕಾದ ಸಮಯವನ್ನು ಆಯ್ಕೆ ಮಾಡಬೇಕು ಮತ್ತು ಅಗತ್ಯವಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ಎಲ್ಲಾ ವಿವರಗಳನ್ನು ಸಲ್ಲಿಸಿದ ನಂತರ, ಭಕ್ತರಿಗೆ ದೃಢೀಕರಣ ಚೀಟಿಯನ್ನು ಕಳುಹಿಸಲಾಗುತ್ತದೆ. ಭಕ್ತರು ಪ್ರವೇಶಿಸುವ ಮೊದಲು ದೇವಾಲಯದ ಕೌಂಟರ್ ನಿಂದ ಪಾಸ್ ಪಡೆಯಬೇಕು.