ಬೆಂಗಳೂರು : ನಮ್ಮ ದೇಶದ ಪ್ರತಿ ಗ್ರಾಮಗಳಲ್ಲೂ ರಾಮ ಮಂದಿರವಿದೆ. ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ರಾಜಕೀಯ ಪಕ್ಷದ ಅಗತ್ಯವಿಲ್ಲ. ರಾಮ ಮಂದಿರ ಯಾವುದೇ ಪಕ್ಷದ ಸ್ವತ್ತು ಅಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವರು ‘ ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಧರ್ಮದ ಉಳಿವಿಗೆ ಯಾವುದೇ ನಾಯಕನ ಅಗತ್ಯವಿಲ್ಲ. ಎಲ್ಲಾ ಧರ್ಮದ ನಂಬಿಕೆಗಳನ್ನು ನಾನು ಗೌರವಿಸುತ್ತೇನೆ. ಆದರೆ ಬಿಜೆಪಿಯ ಜೊತೆಯಲ್ಲಿದ್ದವರು ಮಾತ್ರ ಹಿಂದೂಗಳು ಉಳಿದವರು ಹಿಂದೂಗಳಲ್ಲ ಎಂಬ ರೀತಿಯಲ್ಲಿ ಪ್ರಚಾರ ನಡೆಸಿ, ಜನರ ಮನಸ್ಸಿನಲ್ಲಿ ದ್ವೇಷ ತುಂಬಿ ದೇಶವನ್ನು ಒಡೆಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ.’ ಎಂದರು.
ದೇವಾಲಯಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ನವ ನಿರ್ಮಾಣಕ್ಕೆ ʻಆರಾಧನಾ ಯೋಜನೆʼಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಪಕ್ಷ. ಆದರೆ ಇಂತಹ ವಿಚಾರಗಳಲ್ಲಿ ನಾವು ಎಂದಿಗೂ ರಾಜಕೀಯ ಮಾಡಿಲ್ಲ ಎಂದರು.