ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಇದೀಗ ‘ಮೈಸೂರಿನ ಶಿಲ್ಪಿ’ ಕೆತ್ತಿರುವ ರಾಮಲಲ್ಲಾ ವಿಗ್ರಹ ಆಯ್ಕೆಯಾಗಿದೆ.
ರಾಜಸ್ಥಾನ ಶಿಲ್ಪಿಗಳು ಮತ್ತು ಕರ್ನಾಟಕದ ಇಬ್ಬರು ಶಿಲ್ಪಿಗಳು ಈ ಬಾಲರಾಮನ ವಿಗ್ರಹ ಕೆತ್ತಿದ್ದರು. ಇದೀಗ ಅಂತಿಮವಾಗಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ವಿಗ್ರಹ ಆಯ್ಕೆ ಮಾಡಲಾಗಿದೆ.
ಮಗ ಕೆತ್ತನೆ ಮಾಡಿದ ಶಿಲ್ಪ ಆಯ್ಕೆಯಾಗುತ್ತೆ ಎಂಬ ನಂಬಿಕೆ ಇತ್ತು, ಇದರಿಂದ ಬಹಳ ಸಂತೋಷವಾಗಿದೆ. ಅವರ ತಂದೆ ಇದ್ದರೆ ಬಹಳ ಖುಷಿ ಪಡುತ್ತಿದ್ದರು ಎಂದು ಅರುಣ್ ಯೋಗಿರಾಜ್ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.
ರಾಮಲಲಾ ಮೂರ್ತಿ 5 ವರ್ಷದ ಬಾಲಕನ ಪ್ರತಿರೂಪದಂತೆ ನಿರ್ಮಿಸುವುದಕ್ಕೆ ಶಿಲ್ಪಿಗಳಿಗೆ ಸೂಚನೆ ನೀಡಲಾಗಿತ್ತು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಪಡೆದ 2000 ಗಣ್ಯರ ಪೈಕಿ ಅರುಣ್ ಯೋಗಿರಾಜ್ ಒಬ್ಬರು. ಅರುಣ್ ಅವರ ತಂದೆ ಹೆಸರು ಯೋಗಿ ರಾಜ್ ಅವರು ಕೂಡ ಶಿಲ್ಪಿಯಾಗಿದ್ದರು.