ರಾಜಮೌಳಿ ನಿರ್ದೇಶನದ ರಾಮ್ ಚರಣ್ ಅಭಿನಯದ ‘ಮಗಧೀರ’ ಚಿತ್ರ 2009 ಜುಲೈ 9 ರಂದು ತೆರೆಕಂಡಿತ್ತು, ಕಾಲಭೈರವ ಹಾಗೂ ಹರ್ಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಮ್ ಚರಣ್ ಅವರ ನಟನೆ ಹಾಗೂ ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಬಾಕ್ಸಾಫೀಸ್ ಕೊಳ್ಳೆ ಹೊಡೆದು ಹೊಸ ದಾಖಲೆ ಬರೆದಿದ್ದ ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 15 ವರ್ಷಗಳಾಗಿವೆ. ರಾಮ್ ಚರಣ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.
ಈ ಚಿತ್ರವನ್ನು ಗೀತಾ ಆರ್ಟ್ಸ್ ಬ್ಯಾನರ್ ನಲ್ಲಿ ಅಲ್ಲು ಅರವಿಂದ್ ನಿರ್ಮಾಣ ಮಾಡಿದ್ದು, ರಾಮ್ ಚರಣ್ ಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ಅಭಿನಯಿಸಿದ್ದಾರೆ. ದೇವ್ ಗಿಲ್, ಶ್ರೀಹರಿ, ಸುನಿಲ್, ಸಮೀರ್ ಹಸನ್, ಸುಬ್ಬರಾಯ ಶರ್ಮ, ಶರತ್ ಬಾಬು, ಛತ್ರಪತಿ ಶೇಖರ್, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಎಂ ಎಂ ಕಿರಾವಾಣಿ ಸಂಗೀತ ಸಂಯೋಜನೆ ನೀಡಿದ್ದು, ಕೋಟಿಗಿರಿ ವೆಂಕಟೇಶ್ವರ ರಾವ್ ಸಂಕಲನವಿದೆ.