alex Certify ಸಚಿನ್‌ ಜೊತೆ ಫಾರ್ಮುಲಾ ಇ ರೇಸ್‌ ವೀಕ್ಷಿಸಿದ ರಾಮ್‌ ಚರಣ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿನ್‌ ಜೊತೆ ಫಾರ್ಮುಲಾ ಇ ರೇಸ್‌ ವೀಕ್ಷಿಸಿದ ರಾಮ್‌ ಚರಣ್

ಹೈದರಾಬಾದ್ ನಲ್ಲಿ ಶನಿವಾರ ಮುಕ್ತಾಯವಾದ ಭಾರತದ ಮೊದಲ ಫಾರ್ಮುಲಾ ಇ ರೇಸ್ ಕಣ್ತುಂಬಿಕೊಂಡ ನಟ ರಾಮ್ ಚರಣ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೊತೆ ಫಾರ್ಮುಲಾ ವೀಕ್ಷಿಸಿದ ಅನುಭವಕ್ಕೆ ವಾಹ್ ಎಂದಿದ್ದಾರೆ.

ಶನಿವಾರ ನಡೆದ ಆಲ್-ಎಲೆಕ್ಟ್ರಿಕ್ ಫಾರ್ಮುಲಾ ಇ ಮೋಟಾರ್ ಚಾಂಪಿಯನ್‌ಶಿಪ್ ನಲ್ಲಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ರೇಸ್ ವೀಕ್ಷಿಸಲು ನಾನು “ಥ್ರಿಲ್” ಆಗಿದ್ದೇನೆ ಎಂದು ರಾಮ್ ಚರಣ್ ಹೇಳಿದ್ದಾರೆ.

ಈವೆಂಟ್‌ನ ಚಿತ್ರಗಳ ಸರಣಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ರಾಮ್ ಚರಣ್, “ಎಂತಹ ಅದ್ಭುತ ಓಟ. ಇಂದು ಫಾರ್ಮುಲಾ ಇ ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಮಹೀಂದ್ರಾ ರೇಸಿಂಗ್ ವೀಕ್ಷಿಸಲು ಸಾಕಷ್ಟು ರೋಮಾಂಚನಗೊಂಡೆ. ನಮ್ಮ ದೇಶ, ನಮ್ಮ ರಾಜ್ಯ ಮತ್ತು ನಮ್ಮ ಹೈದರಾಬಾದ್ ನಗರಕ್ಕೆ ಎಂತಹ ಹೆಮ್ಮೆಯ ಕ್ಷಣ ಎಂದು ಉದ್ಗರಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ನಟಿ ಶ್ರುತಿ ಹಾಸನ್, ದುಲ್ಕರ್ ಸಲ್ಮಾನ್, ನಾಗ ಚೈತನ್ಯ, ಶಿಖರ್ ಧವನ್, ಯುಜುವೇಂದ್ರ ಚಹಾಲ್, ಚಲನಚಿತ್ರ ನಿರ್ಮಾಪಕ ಅಲ್ಲು ಅರವಿಂದ್, ಆಂಧ್ರಪ್ರದೇಶ ಸಚಿವ ಜಿ ಅಮರನಾಥ್ ಮತ್ತು ಟಿಡಿಪಿ ಸಂಸದ ರಾಮಮೋಹನ್ ನಾಯ್ಡು ಕೂಡ ಭಾಗವಹಿಸಿದ್ದರು.

— Ram Charan (@AlwaysRamCharan) February 11, 2023

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...