ನಟಿ ಕರೀನಾ ಕಪೂರ್ ಮಕ್ಕಳನ್ನು ನೋಡಿಕೊಳ್ತಾ ಇದ್ದ ದಾದಿ ಸಾಕಷ್ಟು ವೈರಲ್ ಆಗಿದ್ದರು. ಆಕೆ ಪಡೆಯುವ ಸಂಬಳದ ಬಗ್ಗೆ ಕೂಡ ಚರ್ಚೆಗಳಾಗಿದ್ದವು. ವಿಶೇಷ ಅಂದ್ರೆ ಇದೇ ಮಹಿಳೆ ಶಾಹಿದ್ ಕಪೂರ್ ಮತ್ತು ಮೀರಾ ದಂಪತಿಯ ಮಕ್ಕಳನ್ನೂ ನೋಡಿಕೊಂಡಿದ್ದಾರೆ. ಇದೀಗ ಹೊಸದೊಂದು ಜವಾಬ್ಧಾರಿ ದಾದಿಯ ಹೆಗಲೇರಿದೆ.
ನಟ ರಾಮ್ ಚರಣ್ ಹಾಗೂ ಉಪಾಸನಾ ದಂಪತಿಯ ಪುತ್ರಿಯನ್ನು ಸಾವಿತ್ರಿ ನೋಡಿಕೊಳ್ಳಲಿದ್ದಾರೆ. ರಾಮ್ ಚರಣ್, ಉಪಾಸನಾ ತಮ್ಮ ಮಗಳು ಕ್ಲಿನ್ ಕಾರಾ ಜೊತೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ದಾದಿ ಸಾವಿತ್ರಿ ಕೂಡ ಅವರೊಂದಿಗಿದ್ದರು. ಹಾಗಾಗಿ ಕರೀನಾ ಪುತ್ರರನ್ನು ನೋಡಿಕೊಂಡಿದ್ದ ಸಾವಿತ್ರಿ, ರಾಮ್ಚರಣ್ ಪುತ್ರಿಯನ್ನೂ ನೋಡಿಕೊಳ್ತಿರೋದು ಖಚಿತವಾಗಿದೆ.
ಮೂಲಗಳ ಪ್ರಕಾರ ಕರೀನಾ ಪ್ರತಿ ತಿಂಗಳು ದಾದಿ ಸಾವಿತ್ರಿಗೆ 1.5 ಲಕ್ಷ ರೂಪಾಯಿ ಸಂಬಳ ನೀಡುತ್ತಿದ್ದರಂತೆ. ಅಷ್ಟೇ ಅಲ್ಲ ಓವರ್ಟೈಮ್ ಕೆಲಸ ಮಾಡಿದರೆ ಸಂಬಳ ಇನ್ನೂ ಹೆಚ್ಚಾಗುತ್ತದೆ. ಈಗ ರಾಮ್ ಚರಣ್ ಕೂಡ ಸಾವಿತ್ರಿಗೆ ಲಕ್ಷಗಳ ಲೆಕ್ಕದಲ್ಲೇ ವೇತನ ನೀಡಲಿದ್ದಾರೆ ಅಂತಾ ಹೇಳಲಾಗ್ತಿದೆ.