
11 ವರ್ಷಗಳ ದಾಂಪತ್ಯದ ನಂತರ ಮೊದಲ ಮಗುವಿನ ಪೋಷಕರಾಗಿರುವ ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ಮೊದಲ ಬಾರಿಗೆ ತಮ್ಮ ಹೆಣ್ಣುಮಗುವಿನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.
ಜೂನ್ 20 ರಂದು ರಾಮ್ ಚರಣ್ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಹೆರಿಗೆಯಾದ ಮೂರು ದಿನಗಳ ನಂತರ ಉಪಾಸನಾ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಈ ವೇಳೆ ದಂಪತಿ ಆಸ್ಪತ್ರೆ ಹೊರಗೆ ಮಾಧ್ಯಮಗಳೆದುರು ಕಾಣಿಸಿಕೊಂಡರು. ಆದರೆ ಅವರು ತಮ್ಮ ಮಗುವಿನ ಮುಖವನ್ನು ಬಹಿರಂಗಪಡಿಸಿಲ್ಲ.
ಹೈದರಾಬಾದ್‌ನ ಆಸ್ಪತ್ರೆಯ ಹೊರಗೆ ಜಮಾಯಿಸಿದ ಚಿರಂಜೀವಿ ಮತ್ತು ರಾಮ್ ಚರಣ್ ಅಭಿಮಾನಿಗಳು ಕೇಕ್ ಕತ್ತರಿಸಿ ಬಲೂನ್‌ಗಳನ್ನು ಹಾರಿಸಿ ಸಂಭ್ರಮಿಸಿದರು.
ರಾಮ್ ಮತ್ತು ಉಪಾಸನಾ ಜೂನ್ 14, 2012 ರಂದು ವಿವಾಹವಾದರು. 11 ವರ್ಷದ ನಂತರ ಮೊದಲ ಮಗುವನ್ನ ಸ್ವಾಗತಿಸಿದ್ದು ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.