![Movie review 'Ricky': Rishab Shetty makes an impressive debut | Movie review 'Ricky': Rishab Shetty makes an impressive debut](https://dc-cdn.s3-ap-southeast-1.amazonaws.com/dc-Cover-20160123113937.Medi.png)
ರಿಷಬ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ, ರಕ್ಷಿತ್ ಶೆಟ್ಟಿ ಅಭಿನಯದ ‘ರಿಕ್ಕಿ’ ಸಿನಿಮಾ 2016 ಜನವರಿ 22ರಂದು ರಾಜ್ಯದಾದ್ಯಂತ ತೆರೆಕಂಡಿತ್ತು. ಈ ಚಿತ್ರ ತೆರೆ ಮೇಲೆ ಬಂದು ಇಂದಿಗೆ ಎಂಟು ವರ್ಷಗಳಾಗಿದ್ದು, ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಎಸ್ ವಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಎಸ್ ವಿ ಬಾಬು ನಿರ್ಮಾಣ ಮಾಡಿದ್ದ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಹರಿಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದು, ಪ್ರಮೋದ್ ಶೆಟ್ಟಿ ಸೇರಿದಂತೆ ಅಚ್ಯುತ್ ಕುಮಾರ್, ಶಶಿಕಲಾ, ವೀಣಾ ಸುಂದರ್, ಸಾಧುಕೋಕಿಲ, ಮಂಜುನಾಥ್, ರಘು ಪಾಂಡೇಶ್ವರ್, ದಿನೇಶ್ ಮಂಗಳೂರು, ತೆರೆ ಹಂಚಿಕೊಂಡಿದ್ದಾರೆ. ಎಂ ಎಂ ವಿಶ್ವ ಸಂಕಲನ, ವೆಂಕಟೇಶ್ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತವಿದೆ.
![](https://kannadadunia.com/wp-content/uploads/2024/01/46f6c948-512c-4b8d-94a7-effd25fe2664-814x1024.jpg)