ರಕ್ಷಾ ಬಂಧನಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಈ ಬಾರಿ ರಕ್ಷಾ ಬಂಧನವನ್ನು ಆಗಸ್ಟ್ 22 ರಂದು ಆಚರಿಸಲಾಗುತ್ತದೆ. 474 ವರ್ಷಗಳ ನಂತರ ರಕ್ಷಾ ಬಂಧನದ ದಿನ ವಿಶೇಷ ಯೋಗ ಕೂಡಿ ಬರ್ತಿದೆ.
ಜ್ಯೋತಿಷಿಗಳ ಪ್ರಕಾರ, ಈ ಬಾರಿ ರಕ್ಷಾ ಬಂಧನದ ದಿನ ಭದ್ರನ ನೆರಳು ಇರುವುದಿಲ್ಲ. ಹಾಗಾಗಿ ಸಹೋದರಿಯರು ದಿನವಿಡೀ ತಮ್ಮ ಸಹೋದರರಿಗೆ ರಾಖಿ ಕಟ್ಟಬಹುದು. ಈ ಬಾರಿ ರಕ್ಷಾ ಬಂಧನದ ಶುಭ ಮುಹೂರ್ತ ಬೆಳಿಗ್ಗೆ 5.50 ರಿಂದ ಸಂಜೆ 6.03 ರವರೆಗೆ ಇರಲಿದೆ. ಭದ್ರ ಕಾಲ, ಆಗಸ್ಟ್ 23 ರಂದು ಬೆಳಿಗ್ಗೆ 5.34 ರಿಂದ 6.12 ರವರೆಗೆ ಇರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ರಕ್ಷಾ ಬಂಧನದ ದಿನದಂದು, ಸಿಂಹ ರಾಶಿಯಲ್ಲಿ ಸೂರ್ಯ, ಮಂಗಳ ಮತ್ತು ಬುಧ ಗ್ರಹ ಒಟ್ಟಿಗೆ ಬರ್ತಿದೆ. ಸೂರ್ಯನು ಸಿಂಹ ರಾಶಿಯ ಅಧಿಪತಿ. ಈ ರಾಶಿಯಲ್ಲಿ ಗೆಳೆಯ ಮಂಗಳ ಕೂಡ ಅವನ ಜೊತೆಯಲ್ಲಿ ಇರುತ್ತಾನೆ. ಶುಕ್ರನು ಕನ್ಯಾರಾಶಿಯಲ್ಲಿರುತ್ತಾನೆ. ಗ್ರಹಗಳ ಇಂತಹ ಯೋಗವು ತುಂಬಾ ಮಂಗಳಕರ ಮತ್ತು ಫಲದಾಯಕವಾಗಿರುತ್ತದೆ. ಇಂತಹ ಅಪರೂಪದ ಗ್ರಹಗಳ ಸಂಯೋಜನೆಯು 474 ವರ್ಷಗಳ ನಂತರ ರಕ್ಷಾ ಬಂಧನದ ದಿನ ಬರ್ತಿದೆ.
ಗಜಕೇಸರಿ ಯೋಗವು ರಕ್ಷಾ ಬಂಧನದಂದು ಬರ್ತಿದೆ, ಚಂದ್ರ ಮತ್ತು ಗುರು ಮಧ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿ ಕುಳಿತಾಗ ಈ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ಜನರನ್ನು ಅದೃಷ್ಟವಂತರನ್ನಾಗಿಸುತ್ತದೆ. ಇದರಿಂದಾಗಿ ಜನರು ಹಣ, ಆಸ್ತಿ, ಮನೆ, ವಾಹನದಂತಹ ಸುಖಗಳನ್ನು ಪಡೆಯುತ್ತಾರೆ.