ಬಾಲಿವುಡ್ ‘ಡ್ರಾಮಾ ಕ್ವೀನ್’ ರಾಖಿ ಸಾವಂತ್ ವಿವಾದಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ತಾನು ವಿವಾಹವಾಗಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದ ರಾಖಿ, ತನ್ನ ಪತಿಯನ್ನು ತೋರಿಸಲು ಬಹುಕಾಲದವರೆಗೆ ನಖರಾ ಮಾಡಿದ್ದರು. ಕೊನೆಗೂ ಟಿವಿ ಶೋ ಒಂದರಲ್ಲಿ ರಿತೇಶ್ ಸಿಂಗ್ ಎಂಬಾತನನ್ನು ತೋರಿಸಿ ಈತನೇ ನನ್ನ ಪತಿ ಎಂದು ಹೇಳಿದ್ದರು.
ಇದಾದ ಬಳಿಕ ಏಕಾಏಕಿ ಮೈಸೂರಿನ ಆದಿಲ್ ಖಾನ್ ಎಂಬಾತನನ್ನು ಮಾಧ್ಯಮ ಪ್ರತಿನಿಧಿಗಳಿಗೆ ಪರಿಚಯಿಸಿದ ರಾಖಿ ಸಾವಂತ್, ಈತ ನನ್ನ ಪ್ರಿಯತಮ ಎಂದು ಹೇಳಿಕೊಂಡಿದ್ದರು. ಅಲ್ಲದೆ ಆದಿಲ್ ಖಾನ್ ತನಗಾಗಿ ದುಬಾರಿ ಕಾರು ಕೊಡಿಸುವುದಾಗಿ ಹೇಳಿ ಹೆಮ್ಮೆ ಪಟ್ಟುಕೊಂಡಿದ್ದರು.
ಮಂಗಳಮುಖಿಯರಿಗೆ ರಾಜ್ಯ ಸರ್ಕಾರದಿಂದ ‘ಗುಡ್ ನ್ಯೂಸ್’
ಈಗ ರಾಖಿ ಸಾವಂತ್ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಮುಂಬೈನಲ್ಲಿ ಪಾಪರಾಜಿಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ರಾಖಿ, ಮಾಜಿ ಪತಿ ರಿತೇಶ್ ಸಿಂಗ್ ನನ್ನ ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ಹ್ಯಾಕ್ ಮಾಡಿದ್ದಾನೆ. ಜೊತೆಗೆ ಪಾಸ್ವರ್ಡ್ ಸಹ ಬದಲಾಯಿಸಿದ್ದಾನೆ ಎಂದಿದ್ದಾರೆ.
ಆದಿಲ್ ಖಾನ್ ಜೊತೆ ನಾನು ಸಲುಗೆಯಿಂದ ಇರುವುದು ಆತನಿಗೆ ಸಹಿಸಲಾಗುತ್ತಿಲ್ಲ ಹೀಗಾಗಿಯೇ ಇಂತಹ ಕೃತ್ಯ ಮಾಡಿದ್ದಾನೆ ಎಂದಿರುವ ರಾಖಿ ಸಾವಂತ್, ಇದೀಗ ರಿತೇಶ್ ಸಿಂಗ್ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.