
ರಾಖಿ ಸಾವಂತ್ ಈ ಬಗ್ಗೆ ಮಾತನಾಡುತ್ತಾ, “ನಾನು ಪಾಕಿಸ್ತಾನಿ ಜನರನ್ನು ತುಂಬಾ ಇಷ್ಟಪಡುತ್ತೇನೆ ಮತ್ತು ಅಲ್ಲಿ ನನಗೆ ಅನೇಕ ಅಭಿಮಾನಿಗಳಿದ್ದಾರೆ. ನನ್ನ ಹಿಂದಿನ ವಿವಾಹಗಳಲ್ಲಿ ನನಗೆ ಆಗಿರುವ ನೋವು, ನಾನು ಅನುಭವಿಸಿದ ನರಕಯಾತನೆ, ಎಲ್ಲವೂ ಪಾಕಿಸ್ತಾನದ ಪ್ರಜೆಗಳಿಗೆ ಗೊತ್ತು ಅವರು ಕೂಡ ಎಲ್ಲವನ್ನು ನೋಡಿದ್ದಾರೆ. ಖಂಡಿತವಾಗಿಯೂ ಒಂದು ನಿರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದೇನೆ” ಎಂದು ಹೇಳಿದ್ದಾರೆ.
ಇಸ್ಲಾಮಿಕ್ ಸಂಪ್ರದಾಯಗಳ ಪ್ರಕಾರ ಪಾಕಿಸ್ತಾನದಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದ್ದು, ಆರತಕ್ಷತೆ ಸಮಾರಂಭ: ಭಾರತದಲ್ಲಿ ನಡೆಯಲಿದೆ ಎನ್ನಲಾಗಿದೆ. ಇನ್ನು ಹನಿಮೂನ್ ಗೆ ಸ್ವಿಟ್ಜರ್ಲೆಂಡ್ ಅಥವಾ ನೆದರ್ಲ್ಯಾಂಡ್ಸ್ಗೆ ಹೋಗಲು ಪ್ಲಾನ್ ಮಾಡಿದ್ದು, ಅಂತಿಮವಾಗಿ ದುಬೈನಲ್ಲಿ ನೆಲೆಸಲಿದ್ದಾರಂತೆ.
ರಾಖಿ ಸಾವಂತ್ ಕುರಿತು ಒಂದಷ್ಟು ವಿವರ
ಬಾಲಿವುಡ್ ನಟಿ ಮತ್ತು ಮಾಡೆಲ್ ಆಗಿರುವ ರಾಖಿ ಸಾವಂತ್, ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಜನಪ್ರಿಯರಾಗಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಗಾಗಿ ಅವರು ಹೆಸರುವಾಸಿಯಾಗಿದ್ದಾರೆ. ಇದಕ್ಕೂ ಮೊದಲು ರಾಖಿ ಸಾವಂತ್ ಇಬ್ಬರು ವ್ಯಕ್ತಿಗಳನ್ನು ವಿವಾಹವಾಗಿದ್ದು, ಅದರಲ್ಲೂ ಒಂದು ವಿವಾಹ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ರಾಖಿ ಸಾವಂತ್ ಮದುವೆ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದ್ದು, ರಾಖಿ ಸಾವಂತ್ ಅವರ ವೈಯಕ್ತಿಕ ಜೀವನದ ಬಗ್ಗೆ ಜನರು ಕುತೂಹಲ ಹೊಂದಿದ್ದಾರೆ.