
ನವದೆಹಲಿ: ರಾಜ್ಯಸಭೆಯ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಅವರನ್ನು ಮಹಾರಾಷ್ಟ್ರ ವೀಕ್ಷಕರಾಗಿ ನೇಮಿಸಲಾಗಿದೆ.
ರಾಜಸ್ಥಾನಕ್ಕೆ ಪವನ್ ಕುಮಾರ್ ಬನ್ಸಾಲ್ ಮತ್ತು ಟಿ.ಎಸ್. ಸಿಂಘ್ ದೇಯೋ, ಹರಿಯಾಣಕ್ಕೆ ಭೂಪೇಶ್ ಬಾಘೇಲ್ ಮತ್ತು ರಾಜೀವ್ ಶುಕ್ಲಾ ಅವರನ್ನು ನೇಮಿಸಲಾಗಿದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೇಮಕಾತಿ ಆದೇಶ ನೀಡಿದ್ದು, ತಕ್ಷಣದಿಂದಲೇ ನಿಯೋಜಿತ ರಾಜ್ಯಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರ್ಯೋನ್ಮುಖರಾಗಲು ತಿಳಿಸಿದ್ದಾರೆ.