ನವದೆಹಲಿ: ಸಂಸತ್ ಕಲಾಪ ಆರಂಭವಾದಾಗಿನಿಂದಲೂ ಪೆಗಾಸಸ್ ಹಗರಣ, ಕೃಷಿ ಕಾಯ್ದೆಗೆ ವಿರೋಧ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದು, ಇಂದೂ ಕೂಡ ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿ ಗದ್ದಲ-ಕೋಲಾಹಲವೆಬ್ಬಿಸಿದ ಕಾರಣಕ್ಕೆ 6 ಟಿಎಂಸಿ ಸದಸ್ಯರನ್ನು ಅಮಾನತುಗೊಳಿಸಿ ಸಭಾಪತಿ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದಾರೆ.
ಟಿಎಂಸಿ ಸದಸ್ಯ ಡೋಲಾ ಸೇನ್, ಅರ್ಪಿತಾ ಘೋಷ್, ನದೀಮ್ ಹಕ್, ಅಭಿರ್ ರಂಜನ್ ಬಿಸ್ವಾಸ್, ಶಾಂತಾ ಚೇತ್ರಿ ಹಾಗೂ ಮೌಸಮ್ ನೂರ್ ಅವರನ್ನು ಇಂದಿನ ಕಲಾಪದಿಂದ ಅಮಾನತುಗೊಳಿಸಲಾಗಿದೆ.
ಕೊರೊನಾ ಸೋಂಕು ಹೆಚ್ಚಾದ್ರೂ ವೀಕೆಂಡ್ ಲಾಕ್ಡೌನ್ ತೆಗೆಯಲು ಮುಂದಾದ ಸರ್ಕಾರ
ಪೇಗಾಸಸ್ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆಗ್ರಹಿಸಿ ಟಿಎಂಸಿ ಸದಸ್ಯರು ಗಲಾಟೆ ಆರಂಭಿಸಿದ್ದರು. ಸದನದಲ್ಲಿ ಕೋಲಾಹಲ ಆರಂಭವಾದ ಹಿನ್ನೆಲೆಯಲ್ಲಿ ಕೆಲಕಾಲ ಕಲಾಪ ಮುಂದೂಡಿದರು. ಮತ್ತೆ ಕಲಾಪ ಆರಂಭವಾದಾಗಲೂ ಸದಸ್ಯರು ನಾಮಫಲಕಗಳನ್ನು ಹಿಡಿದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಈ ಹಿನ್ನೆಲೆಯಲ್ಲಿ ನಿಯಮ 255ರ ಅಡಿಯಲ್ಲಿ ಸಂಸದರನ್ನು ಇಂದಿನ ಕಲಾಪದಿಂದ ಅಮಾನತುಗೊಳಿಸಿ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದರು.