
ಬೆಂಗಳೂರು: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈಗ ಸ್ವತಂತ್ರರು. ಅವರು ಈಗ ಏನುಬೇಕಾದರು ಮಾಡಬಹುದು ಎಂದು ಮಾಜಿ ಶಾಸಕ ರಾಜುಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ಯತ್ನಾಳ್ ಈಗ ಸ್ವತಂತ್ರರು. ಅವರಿಗೆ ಈಗ ಪಕ್ಷದ ಯಾಅವುದೇ ಕಟ್ಟುಪಾಡು, ಚೌಕಟ್ಟು ಇಲ್ಲ. ಇಷ್ಟುದಿನ ನಮ್ಮ ಪಕ್ಷದ ಚೌಕಟ್ಟಿನಲ್ಲಿದ್ದರು. ಈಗ ಸಂಪೂರ್ಣ ಸ್ವತಂತ್ರರಾಗಿದ್ದಾರೆ ಎಂದರು.
ಹೊಸ ಪಕ್ಷ ಕಟ್ಟುವುದಾದರೆ ಕಟ್ಟಲಿ. ಒಂದಲ್ಲ ನಾಲ್ಕು ಪಕ್ಷ ಬೇಕಾದರು ಅವರು ಕಟ್ಟಲಿ. ಈ ಬಗ್ಗೆ ನಾವು ಹೆಚ್ಚೇನು ಹೇಳಲ್ಲ. ಹಿಂದೂ ಕಾರ್ಯಕರ್ತರು ಎಲ್ಲರೂ ಅವರ ಜೊತೆ ಸೇರಿದ್ದಾರೆ. ಸ್ವಲ್ಪ ದಿನ ಕಳೆದ ಬಳಿಕ ಎಲ್ಲವೂ ಸರಿಹೋಗುತ್ತೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.