ಯಾದಗಿರಿ: ಲೋಕಸಭೆ ಚುನಾವಣೆಯೊಂದಿಗೆ ನಡೆದ ಸುರಪುರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಗೆಲುವು ಸಾಧಿಸಿದ್ದಾರೆ. ಉಪಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ರಾಜು ಗೌಡ ಪರಾಭವಗೊಂಡಿದ್ದಾರೆ.
ಒಟ್ಟು 23 ಸುತ್ತುಗಳಲ್ಲಿ ಮಂಗಳವಾರ ಮತ ಎಣಿಕೆ ನಡೆದಿದ್ದು, ಮೊದಲ ಸುತ್ತು ಹೊರತುಪಡಿಸಿ ಉಳಿದ 22 ಸುತ್ತುಗಳಲ್ಲಿ ರಾಜಾ ವೇಣುಗೋಪಾಲ ನಾಯಕ ಮುನ್ನಡೆ ಸಾಧಿಸಿದ್ದರು. 1,14,290 ಮತಗಳನ್ನು ಪಡೆದ ಅವರು ಬಿಜೆಪಿ ಅಭ್ಯರ್ಥಿಯನ್ನು 18:320 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ರಾಜು ಗೌಡ 96,052 ಮತಗಳನ್ನು ಪಡೆದಿದ್ದು, ಪಕ್ಷೇತರ ಅಭ್ಯರ್ಥಿ ಅಶೋಕ ಲಕ್ಷ್ಮಣ 1612, ವೇಣುಗೋಪಾಲ ತಿಮ್ಮಣ್ಣ 514, ವೆಂಕಟಪ್ಪ ನಾಯಕ 447, ಶಶಿಕುಮಾರ್ ಶಿವಪ್ಪ 426 ಮತಗಳನ್ನು ಪಡೆದಿದ್ದಾರೆ. 844 ನೋಟಾ ಮತಗಳು ಚಲಾವಣೆಯಾಗಿವೆ.
ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. 2023 ರಲ್ಲಿ ನಡೆದ ಚುನಾವಣೆಯಲ್ಲಿ ರಾಜು ಗೌಡ 25000 ಮತಗಳ ಅಂತರದಿಂದ ಸೋಲು ಕಂಡಿದ್ದರು. ಈಗ ಉಪಚುನಾವಣೆಯಲ್ಲಿಯೂ ಸೋಲು ಕಂಡಿದ್ದಾರೆ.