
ಸುಮಾರು ಒಂದು ದಶಕದಿಂದ ಡೇಟಿಂಗ್‌ನಲ್ಲಿದ್ದ ರಾಜ್‌ಕುಮಾರ್ ಮತ್ತು ಪತ್ರಲೇಖಾ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರೊಂದಿಗೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಚಂಡೀಗಢದ ಒಬೆರಾಯ್ ಸುಖ್ವಿಲಾಸ್ ಸ್ಪಾ ರೆಸಾರ್ಟ್‌ನಲ್ಲಿ ಇವರ ಕಲ್ಯಾಣೋತ್ಸವ ನೆರವೇರಿದೆ.
ಹಣ ಕಳೆದುಕೊಂಡು ಕಂಗಾಲಾಗಿದ್ದ ವೃದ್ದನಿಗೆ ಲಕ್ಷ ರೂ. ನೀಡಿದ ಪೊಲೀಸ್ ಅಧಿಕಾರಿ
ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡ ರಾಜ್‌ಕುಮಾರ್, ಅಂತಿಮವಾಗಿ 11 ವರ್ಷಗಳ ಪ್ರೀತಿ, ಪ್ರಣಯ, ಸ್ನೇಹ ಮತ್ತು ವಿನೋದದ ನಂತರ, ತನ್ನ ಆತ್ಮಸಂಗಾತಿಯ ಜೊತೆಗೆ ಹೊಸ ಜೀವನಕ್ಕೆ ಕಾಲಿಟ್ಟಿರುವುದಾಗಿ ತಿಳಿಸಿದ್ದಾರೆ. ನಟಿ ಪತ್ರಲೇಖಾ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿವಾಹದ ಮಧುರ ಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.
ಮದುವೆಗೆ, ರಾಜ್‌ಕುಮಾರ್ ರಾವ್ ಗುಲಾಬಿ ಬಣ್ಣದ ದುಪಟ್ಟಾದೊಂದಿಗೆ ಸಾಂಪ್ರದಾಯಿಕ ಬಿಳಿ ಬಣ್ಣದ ಶೇರ್ವಾನಿಯನ್ನು ಧರಿಸಿದ್ದರು. ಪತ್ರಲೇಖಾ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದು, ವಧುವಿನ ಉಡುಪಿನಲ್ಲಿ ಸುಂದರವಾಗಿ ಕಂಗೊಳಿಸಿದ್ದಾರೆ.
ರಾತ್ರಿ ಬೀಳುವ ಭಯಾನಕ ಕನಸು ನೆಮ್ಮದಿ ಹಾಳು ಮಾಡಿದ್ಯಾ….? ಇಲ್ಲಿದೆ ಪರಿಹಾರ
ಇನ್ನು ನೂತನ ದಂಪತಿಗೆ ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಸಾಮಾನ್ಯರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಅಕ್ಟೋಬರ್ 13 ರಂದು ನಿಶ್ಚಿತಾರ್ಥ ಸಮಾರಂಭದೊಂದಿಗೆ ಮದುವೆ ಸಮಾರಂಭ ಆರಂಭಗೊಂಡಿತು. ನಿಶ್ಚಿತಾರ್ಥದ ವೇಳೆ ರಾಜ್‌ಕುಮಾರ್ ಮತ್ತು ಪತ್ರಲೇಖಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ರಾಜ್‌ಕುಮಾರ್ ಮೊಣಕಾಲಿನ ಮೇಲೆ ಕುಳಿತು ಪತ್ರಲೇಖಾಗೆ ಪ್ರಪೋಸ್ ಮಾಡಿದ್ದಾರೆ. ಪತ್ರಲೇಖಾ ಕೂಡ ತನ್ನ ಮೊಣಕಾಲುಗಳ ಮೇಲೆ ಕುಳಿತು ಪರಸ್ಪರ ಉಂಗುರಗಳನ್ನು ಬದಲಾಯಿಸಿದ್ದಾರೆ.
