alex Certify ಈ ತಿಂಗಳಿನಲ್ಲಿ ಸಪ್ತಪದಿ ತುಳಿಯಲಿದ್ದಾರಾ ಬಾಲಿವುಡ್ ನಟ ರಾಜ್‌ಕುಮಾರ್ ರಾವ್, ಪತ್ರಲೇಖಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ತಿಂಗಳಿನಲ್ಲಿ ಸಪ್ತಪದಿ ತುಳಿಯಲಿದ್ದಾರಾ ಬಾಲಿವುಡ್ ನಟ ರಾಜ್‌ಕುಮಾರ್ ರಾವ್, ಪತ್ರಲೇಖಾ..?

ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಹಾಗೂ ನಟಿ ಪತ್ರಲೇಖಾ ಅವರು ಈ ವರ್ಷದ ನವೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎಂಬ ಬಗ್ಗೆ ವ್ಯಾಪಕವಾಗಿ ಸುದ್ದಿ ಹರಡಿದೆ. ಆದರೆ ಈ ವದಂತಿಯ ಬಗ್ಗೆ ಇಬ್ಬರೂ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿಲ್ಲ.

ನವೆಂಬರ್ ಎರಡನೇ ವಾರದಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದ್ದು, ಆಪ್ತರಿಗಷ್ಟೇ ತಿಳಿಸಲಾಗಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ, ಈ ಜೋಡಿಯು ಇನ್ನೂ ಕೂಡ ಮದುವೆಯ ವದಂತಿಗಳನ್ನು ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲ.

ನಟ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಅವರು ಕಳೆದ 6 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿಯು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಈ ವರ್ಷ, ಪ್ರೇಮಿಗಳ ದಿನದಂದು, ಪ್ಯಾರಿಸ್‌ನ ಐಫೆಲ್ ಟವರ್‌ನ ಮುಂದೆ ಫೋಸ್ ನೀಡಿದ್ದರು. ಈ ಇಬ್ಬರೂ ಪ್ರೇಮಿಗಳು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರೇಮಿಗಳ ದಿನದ ಶುಭಾಶಯ ಕೋರಿದ್ದರು.

ರಾಜ್‌ಕುಮಾರ್ ರಾವ್ ಅವರು 2013ರಲ್ಲಿ ಲವ್, ಸೆಕ್ಸ್ ಔರ್ ಧೋಖಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು ನಟಿ ಪತ್ರಲೇಖಾ ಅವರು ಸಿಟಿ ಲೈಟ್ಸ್ ಚಿತ್ರದ ಮುಖಾಂತರ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಲವ್ ಗೇಮ್ಸ್, ಬದ್ನಾಮ್ ಗಲಿ ಮತ್ತು ನಾನು ಕಿ ಜಾನು ಮುಂತಾದ ಚಿತ್ರಗಳಲ್ಲಿ ನಟಿ ಪತ್ರಲೇಖಾ ನಟಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...