alex Certify ಬಟ್ಟೆ ಶೋರೂಮ್‌ನಲ್ಲಿ ಮಹಿಳೆ ಮೇಲೆ ಅಮಾನುಷ ಹಲ್ಲೆ | VIDEO | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆ ಶೋರೂಮ್‌ನಲ್ಲಿ ಮಹಿಳೆ ಮೇಲೆ ಅಮಾನುಷ ಹಲ್ಲೆ | VIDEO

ರಾಜ್‌ಕೋಟ್‌ ನ ಅಮೀನ್ ಮಾರ್ಗ್‌ನಲ್ಲಿರುವ ಬಟ್ಟೆ ಶೋರೂಮ್‌ನಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ ವ್ಯಾಪಾರ ಪಾಲುದಾರ ಚಿರಾಗ್ ಚಂದ್ರನಾ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಗಸ್ಟ್ 23 ರಕ್ಷಾ ಬಂಧನದಂದು ನಡೆದಿದೆ.

ವ್ಯಕ್ತಿ ಕೇವಲ ಐದು ಸೆಕೆಂಡುಗಳಲ್ಲಿ ಎಂಟು ಬಾರಿ ಕಪಾಳಮೋಕ್ಷ ಮಾಡುವುದನ್ನು ವಿಡಿಯೋ ತೋರಿಸುತ್ತದೆ.

ಹಣಕಾಸಿನ ತೊಂದರೆಯಿಂದ ಚಿರಾಗ್‌ ಗೆ ಸಹಾಯ ಮಾಡಲು ಸಹಭಾಗಿತ್ವ ವಹಿಸಿದ್ದ ಮಹಿಳೆ 2 ಲಕ್ಷ ರೂಪಾಯಿ ನೀಡಿದ್ದರು. ಈ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಲಾಗಿದೆ. ಆತ ಬೆದರಿಕೆ ಹಾಕಿದ್ದರೂ, ಹಣಕ್ಕಾಗಿ ನಿರಂತರ ಕಿರುಕುಳವನ್ನು ಎದುರಿಸಿದ ನಂತರ ಧೈರ್ಯದಿಂದ ಮಹಿಳೆ ಸೆಪ್ಟೆಂಬರ್ 5 ರಂದು ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ, ಚಿರಾಗ್‌ನನ್ನು ಶೀಘ್ರದಲ್ಲೇ ಬಂಧಿಸುವ ನಿರೀಕ್ಷೆಯಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...