
ನಿನ್ನೆಯಷ್ಟೇ ‘ರಾಜಯೋಗ’ ಚಿತ್ರದ ಟ್ರೈಲರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.
ಲಿಂಗರಾಜ್ ಉಚ್ಚಂಗಿದುರ್ಗ ನಿರ್ದೇಶಿಸಿರುವ ಈ ಚಿತ್ರದಲ್ಲಿ ಧರ್ಮಣ್ಣ ಕಡೂರ್ ಹಾಗೂ ನಿರೀಕ್ಷ ರಾವ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.
ಕಾಮಿಡಿ ಡ್ರಾಮಾ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ರಾಮರತ್ನ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕುಮಾರ ಕಂಠೀರವ ನಿರ್ಮಾಣ ಮಾಡಿದ್ದು, ಅಕ್ಷಯ್ ರಿಷಬ್ ಸಂಗೀತ ಸಂಯೋಜನೆ ನೀಡಿದ್ದಾರೆ. ವಿಷ್ಣು ಪ್ರಸಾದ್ ಪಿ ಛಾಯಾಗ್ರಹಣವಿದ್ದು, ಬಿಎಸ್ ಕೆಂಪರಾಜು ಸಂಕಲನವಿದೆ.