ಜೈಪುರ್: ಈ ವರ್ಷದ ಕೊನೆಗೆ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಮತದಾರರ ಮನವೊಲಿಕೆಗೆ ಹಲವು ಯೋಜನೆ ಘೋಷಿಸ ತೊಡಗಿದೆ.
ರಾಜಸ್ಥಾನದಲ್ಲಿ 1.33 ಕೋಟಿ ಅರ್ಹ ಮಹಿಳಾ ಮತದಾರರಿದ್ದು, ಚುನಾವಣೆಯಲ್ಲಿ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮಹಿಳೆಯರನ್ನು ಸೆಳೆಯಲು ಕಾಂಗ್ರೆಸ್ ಉಚಿತ ಮೊಬೈಲ್ ಯೋಜನೆ ಘೋಷಿಸಿದೆ.
ರಕ್ಷಾಬಂಧನದ ಸಂದರ್ಭದಲ್ಲಿ 40 ಲಕ್ಷ ಮಹಿಳೆಯರಿಗೆ ಮೊಬೈಲ್ ನೀಡುವುದಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೊಟ್ ಹೇಳಿದ್ದಾರೆ. ಮೊಬೈಲ್ ಉಚಿತವಾಗಿ ನೀಡುವ ಯೋಜನೆಯನ್ನು ಮೂರು ಹಂತದಲ್ಲಿ ಜಾರಿಗೊಳಿಸಲಾಗುತ್ತದೆ. ಉಚಿತವಾಗಿ ವಿತರಿಸುವ ಮೊಬೈಲ್ ದರವನ್ನು ನಿಗದಿಪಡಿಸಿ ಭೌತಿಕವಾಗಿ ವಿತರಿಸಬೇಕೇ ಅಥವಾ ಮೊತ್ತವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕೇ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ನಿಗದಿತ ಮೊತ್ತವನ್ನು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡುವುದರಿಂದ ಅವರಿಗೆ ಬೇಕಾದ ಮೊಬೈಲ್ ಖರೀದಿಸಬಹುದು. ಹೀಗಾಗಿ ಬ್ಯಾಂಕ್ ಖಾತೆಗೆ ಮೊಬೈಲ್ ಖರೀದಿ ಮೊತತ್ ವರ್ಗಾವಣೆ ಮಾಡುವ ಸಾಧ್ಯತೆ ಇದೆ.